ಗೂಗಲ್ Chrome ನೀವೇನಾದರೂ ಬಳಸುತ್ತಿದ್ದರೆ? ಈ ಕೂಡಲೇ ಅದನ್ನು ಅಪ್ಡೇಟ್ ಮಾಡಿ ಇಲ್ಲವಾದರೆ ನಿಮ್ಮ ಕಂಪ್ಯೂಟರ್ ಹ್ಯಾಕ್ ಆಗುವ ಸಾಧ್ಯತೆ ಇರುತ್ತದೆ.
ಈ ಅಪ್ಡೇಟ್ ಗೂಗಲ್ ಇಂದ ಬಂದಿರುವುದರಿಂದ ನೀವೇನಾದರೂ ಡೆಸ್ಟ್ ಟಾಪ್ ಮೂಲಕ ಅಪ್ಲಿಕೇಶನ್ ಬಹಳ ಸುದ್ದಿದ್ದರೆ? ಈ ಕೂಡಲೇ ಅದನ್ನು ಅಪ್ಡೇಟ್ ಮಾಡಿ.
ನಿಮ್ಮ ಗೂಗಲ್ ಕ್ರೋಮ್ ವರ್ಷನ್ “150.0.7871.181” ಇದಕ್ಕಿಂತ ಕಡಿಮೆ ಇದ್ದರೆ ನಿಮ್ಮ Chrome ಅಪ್ಲಿಕೇಶನ್ vulnerable ಇದೆ ಎಂದರ್ಥ.
12 Vulnerability ಗೂಗಲ್ Chrome ನಲ್ಲಿ ಕಾಣಿಸಿಕೊಂಡಿದೆ
CERT ಅಂದರೆ ನಮ್ಮ ದೇಶದ “ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್” ಅವರು ಇದರ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಲೇಖನದ ಲಿಂಕ್ ಇಲ್ಲಿದೆ:
ಗೂಗಲ್ ಕಂಪನಿ ಕೂಡ ಈ ಒಂದು ಅಪ್ಡೇಟ್ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ
ಲೇಖನದ ಲಿಂಕ್ ಇಲ್ಲಿದೆ:
12 Vulnerability ಗಳು ಯಾವುದು?
| CVE ID | Affected Component |
|---|---|
| CVE-2026-16413 | ANGLE |
| CVE-2026-16414 | Chromecast |
| CVE-2026-16415 | Extensions |
| CVE-2026-16416 | Chromecast |
| CVE-2026-16417 | Skia |
| CVE-2026-16418 | V8 |
| CVE-2026-16419 | ANGLE |
| CVE-2026-16420 | WebAudio |
| CVE-2026-16421 | WebAudio |
| CVE-2026-16422 | Certificate |
| CVE-2026-16423 | UI |
| CVE-2026-16424 | GPU |
ಗೂಗಲ್ ಕ್ರೋಮ್ ವರ್ಷನ್ ತಿಳಿದುಕೊಳ್ಳುವುದು ಹೇಗೆ?
ಮೊದಲಿಗೆ ನೀವು ನಿಮ್ಮ ಗೂಗಲ್ ಕ್ರೋಮ್ ಓಪನ್ ಮಾಡಿಕೊಳ್ಳಬೇಕು.
ನಂತರ ಅಲ್ಲಿ ಕಾಣುವ ಸರ್ಚ್ ಬಾರಿನಲ್ಲಿ ಈ ಒಂದು URL ಟೈಪ್ ಮಾಡಿದರೆ ಸಾಕು:
chrome://version/
ಅಥವಾ
chrome://settings/help
ಅಥವಾ
ಕಮಾಂಡ್ ಮೂಲಕ ನೀವೇನಾದರೂ google chrome version ಹುಡುಕಬೇಕಂತಿದ್ದರೆ? ಈ ಒಂದು Powershell ಕಮಾಂಡ್ ಬಳಸಬಹುದು:
(Get-Item “C:\ProgramFiles\Google\Chrome\Application\chrome.exe”).VersionInfo.ProductVersion

ನಿಮ್ಮ ಗೂಗಲ್ ಕ್ರೋಮ್ ಲೇಟೆಸ್ಟ್ ಆಗಿ ಈ ಒಂದು version ಇರಬೇಕು “150.0.7871.186” .
ಇಲ್ಲದಿದ್ದರೆ? ಈ ಕೂಡಲೇ ಅಪ್ಡೇಟ್ ಮಾಡಿ.
ಧನ್ಯವಾದಗಳು.