ITR: ಭಾರತೀಯ ತೆರಿಗೆದಾರರ ಮೇಲೆ ಹೊಸ Phishing ಮತ್ತು Malware ದಾಳಿ! ನೀವು Safe ಆಗಿದ್ದೀರಾ?  

ನಮ್ಮ ದೇಶದಲ್ಲಿ ಈಗಾಗಲೇ ITR ಟ್ಯಾಕ್ಸ್ ಕಟ್ಟಲು ಟ್ಯಾಕ್ಸ್ ಸೀಸನ್ ಪ್ರಾರಂಭವಾಗಿದೆ. 

ಇದರ ಜೊತೆಗೆ Malware campaign ಕೂಡ ಶುರುವಾಗಿದೆ.

ಏನಿದು malware campaign ಅಂತ ನಿಮ್ಮಲ್ಲಿ ಒಂದು ಪ್ರಶ್ನೆ ಬಂದಿರಬಹುದು.

ಯಾರು ನಮ್ಮ ದೇಶದಲ್ಲಿ ಸಂಪಾದನೆ ಮಾಡುತ್ತಿರುತ್ತಾರೋ ಅಂತವರೆಲ್ಲ ITR ಟ್ಯಾಕ್ಸ್ file ಕಟ್ಟಬೇಕು.

ಇದು ನಮ್ಮ ದೇಶದ ಸರ್ಕಾರದ ನಿಯಮವಾಗಿದೆ. ಈ ವಿಷಯಗಳು ನಿಮಗೆ ಈಗಾಗಲೇ ತಿಳಿದಿರುತ್ತದೆ ಅದರಂತೆ ನೀವು ಪ್ರತಿ ವರ್ಷ ಟ್ಯಾಕ್ಸ್ ಫೈಲ್ ಮಾಡುತ್ತಾ ಇರುತ್ತೀರಾ.

ಆದರೆ ಇಲ್ಲಿ ಈ ಒಂದು ಅವಕಾಶವನ್ನು ಬಳಸಿಕೊಳ್ಳುತ್ತಿರುವ Hacker ಏನು ಮಾಡುತ್ತಿದ್ದಾರೆ ಎಂದರೆ?

ನಿಮಗೆ ಸರ್ಕಾರ ಕಡೆಯಿಂದ ಬಂದಂತೆ ಒಂದು Fake ಮೆಸೇಜ್ ಮತ್ತು ಪಿಡಿಎಫ್ ಗಳನ್ನು ಕಳುಹಿಸುತ್ತಿದ್ದಾರೆ. ಯಾಕೆ ಹೀಗೆ ಮಾಡುತ್ತಿದ್ದಾರೆ? ಇದರಿಂದ ಇವರಿಗೆ ಏನು ಲಾಭ?  

ಈ ಎಲ್ಲಾ ಪ್ರಶ್ನೆಗೆ ನಿಮಗೆ ಈ ಲೇಖನದಲ್ಲಿ ಉತ್ತರ ಸಿಗುತ್ತದೆ.

ಭಾರತದ ITR ಸೀಸನ್ ತಿಂಗಳು ಪ್ರಾರಂಭವಾಗಿದೆ

Month What Happens Who Needs to Care
April New Financial Year starts. Form 16 starts getting ready. Everyone
May Companies start issuing Form 16. Salaried people
June Advance Tax (1st installment) due – 15 June. People with business/other income
July ITR Filing Deadline for most people (31 July). Advance Tax (2nd installment) – 15 July. Salaried + Non-audit cases
August ITR deadline for business income (non-audit) – 31 Aug. Freelancers, small business
September Advance Tax (3rd installment) – 15 September. Business / high income people
October ITR deadline for Tax Audit cases – 31 October. Businesses under audit
November Transfer Pricing cases deadline – 30 November. Companies with foreign transactions
December Belated ITR last date – 31 December. Advance Tax (4th installment) – 15 December. People who missed earlier deadlines
January
February Budget usually announced. Everyone (new tax rules)
March Financial Year ends (31 March). Last chance for investments (80C etc. under old regime). Everyone

ನೀಡಿರುವ ಪಟ್ಟಿಯ ಮೂಲಕ ಈಗ ನಾವು ಆಗಸ್ಟ್ ತಿಂಗಳಿನಲ್ಲಿ ಇದ್ದೇವೆ ಈ ತಿಂಗಳು ಕೂಡ ನಾವು ITR Tax File ಸರ್ಕಾರಕ್ಕೆ ಕಟ್ಟಬೇಕು. 

ಇಲ್ಲಿ Hacker ಯಾವ ರೀತಿ ಬುದ್ದಿಯನ್ನು ಉಪಯೋಗಿಸುತ್ತಿದ್ದಾರೆ ಅಂದರೆ. 

ಸಾಮಾನ್ಯವಾಗಿ ಇದೇ ಕೊನೆಯ ತಿಂಗಳು, ತಪ್ಪಿಸಿದರೆ ಫೈನ್ ಬೀಳುತ್ತದೆ ಎಂದು ಜನರು ಬಹಳ ಆತಂಕದಿಂದ ಟ್ಯಾಕ್ಸ್ ಫೈಲ್ ಮಾಡುತ್ತಾ ಇರುತ್ತಾರೆ.

ಇದೇ ಸಂದರ್ಭವನ್ನು ಬಳಸಿಕೊಂಡು ITR tax ಕಟ್ಟುವಂತಹ ಜನರ ಮೊಬೈಲ್ ಫೋನಿಗೆ ಸರ್ಕಾರದಿಂದ ಬಂದಿರುವ ಹಾಗೆ ಫೇಕ್ ಮೆಸೇಜ್ ಕಳಿಸುತ್ತಿದ್ದಾರೆ. 

ಭಾರತದಲ್ಲಿ ಯಾರು ಟ್ಯಾಕ್ಸ್ ಕಟ್ಟಬೇಕು ಎಂಬ ಪಟ್ಟಿ

Type of Person Needs to File ITR? Example
Salaried employee (any company) Yes (if income > basic limit) You (₹45,000/month)
IT company employee Yes Software engineer, tester, etc.
Bank employee Yes Bank clerk, manager
Shop owner / Kirana store Yes Small business
Doctor, Lawyer, CA Yes Professionals
Freelancer / YouTuber / Uber driver Yes Gig workers
Farmer (with high other income) Sometimes
Housewife with high interest/FD income Sometimes
Student with internship stipend Sometimes

ಭಾರತದ ಹೊಸ ಟ್ಯಾಕ್ಸ್ Regime ಪ್ರಕಾರ ಸಂಪಾದನೆ 12 ಲಕ್ಷಕ್ಕಿಂತ ಕಡಿಮೆ ಇದ್ದರೆ ನೀವು ಯಾವುದೇ ರೀತಿಯ ಟ್ಯಾಕ್ಸ್ ಕಟ್ಟುವಂತಿಲ್ಲ ಎಂದು ಪ್ರಕಟಿಸಿದ್ದಾರೆ.

ಯಾವ ರೀತಿ Hackers ಸ್ಕ್ಯಾಮ್ ಮಾಡುತ್ತಿದ್ದಾರೆ

ವಿಷಯ (Topic) ಹೇಗೆ ಮೋಸ ಮಾಡುತ್ತಾರೆ (How They Scam) ಎಚ್ಚರಿಕೆ (Warning)
ನಕಲಿ WhatsApp ಸಂದೇಶ ಸರ್ಕಾರಿ ಲೋಗೋ ಮತ್ತು ಆದಾಯ ತೆರಿಗೆ ಇಲಾಖೆಯ ಹೆಸರಿನಲ್ಲಿ ನಕಲಿ ನೋಟಿಸ್ ಕಳುಹಿಸುತ್ತಾರೆ ಸರ್ಕಾರ ಎಂದಿಗೂ WhatsApp ಮೂಲಕ ನೋಟಿಸ್ ಕಳುಹಿಸುವುದಿಲ್ಲ
72 ಗಂಟೆ ಗಡುವು “72 ಗಂಟೆಯಲ್ಲಿ ಕ್ರಮ ತೆಗೆದುಕೊಳ್ಳಿ, ಇಲ್ಲದಿದ್ದರೆ ದಂಡ” ಎಂದು ಭಯ ಹುಟ್ಟಿಸುತ್ತಾರೆ ಗಾಬರಿ ಬೀಳಬೇಡಿ — ಇದು ಒತ್ತಡ ಹಾಕುವ ತಂತ್ರ
ನಕಲಿ ದಾಖಲೆ ಲಿಂಕ್ “Documents Download ಮಾಡಿ” ಎಂದು ಲಿಂಕ್ ಕೊಡುತ್ತಾರೆ — ಅದರಲ್ಲಿ ವೈರಸ್ ಇರುತ್ತದೆ ಯಾವ ಲಿಂಕ್ ಅನ್ನೂ ಕ್ಲಿಕ್ ಮಾಡಬೇಡಿ
ZIP ಫೈಲ್ ವೈರಸ್ ITD.zip ಹೆಸರಿನ ಫೈಲ್ ಕಳುಹಿಸುತ್ತಾರೆ — ತೆರೆದರೆ ನಿಮ್ಮ ಫೋನ್/ಕಂಪ್ಯೂಟರ್ ಹ್ಯಾಕ್ ಆಗುತ್ತದೆ ZIP ಫೈಲ್ ತೆರೆಯಲೇಬೇಡಿ, ತಕ್ಷಣ ಡಿಲೀಟ್ ಮಾಡಿ
ನಕಲಿ ವೆಬ್‌ಸೈಟ್ ಲಿಂಕ್ .lol, .ink, .autos ಮುಂತಾದ ನಕಲಿ ವೆಬ್‌ಸೈಟ್‌ಗಳಿಗೆ ಕರೆದೊಯ್ಯುತ್ತಾರೆ ಅಸಲಿ ಸೈಟ್ ಒಂದೇ: incometax.gov.in
ನಿಮ್ಮ ಡೇಟಾ ಕದಿಯುತ್ತಾರೆ ವೈರಸ್ ಮೂಲಕ ಬ್ಯಾಂಕ್ ಪಾಸ್‌ವರ್ಡ್, OTP, ಮತ್ತು ವ್ಯಕ್ತಿಗತ ಮಾಹಿತಿ ಕದಿಯುತ್ತಾರೆ ತಕ್ಷಣ ಬ್ಯಾಂಕ್ ಮತ್ತು ಪೋಲೀಸರಿಗೆ ತಿಳಿಸಿ
ತಕ್ಷಣ ಏನು ಮಾಡಬೇಕು? ಈ ರೀತಿಯ ಸಂದೇಶ ಬಂದರೆ — ತೆರೆಯಬೇಡಿ, ಕ್ಲಿಕ್ ಮಾಡಬೇಡಿ, ಫಾರ್ವರ್ಡ್ ಮಾಡಬೇಡಿ cybercrime.gov.in ನಲ್ಲಿ ದೂರು ದಾಖಲಿಸಿ ಅಥವಾ 1930 ಗೆ ಕರೆ ಮಾಡಿ
ಯಾವ ರೀತಿ Hackers ITR ಸ್ಕ್ಯಾಮ್ ಮಾಡುತ್ತಿದ್ದಾರೆ
Image Credit: CloudSek Threat Intelligence Team

ನೀವು ಇಲ್ಲಿ ನೋಡಬಹುದು ಹೇಗೆ ವಾಟ್ಸಪ್ ಮೂಲಕ ಫೈಲ್ಗಳನ್ನು ಕಳುಹಿಸುತ್ತಾರೆ.

ಲಿಂಕ್ ಗಳನ್ನು ಕ್ಲಿಕ್ ಮಾಡುವ ಮುನ್ನ ವೆಬ್ಸೈಟ್ ಯಾವುದು ಎಂದು ಮೊದಲು ಪರಿಶೀಲನೆ ಮಾಡಿ ಸರ್ಕಾರದ ವೆಬ್ಸೈಟ್ಗಳು ಸಾಮಾನ್ಯವಾಗಿ ಈ ರೀತಿ ಇರುತ್ತದೆ:

ಹೇಗೆ ಚೆಕ್ ಮಾಡಬೇಕು ಅಸಲಿ ಸೈಟ್ ಹೇಗಿರುತ್ತೆ ನಕಲಿ ಸೈಟ್ ಹೇಗಿರುತ್ತೆ
.gov.in ಇದೆಯಾ ನೋಡಿ incometax.gov.in incometax.lol / incometax.ink
ಹೆಸರು ಸರಿಯಾಗಿ ಸ್ಪೆಲ್ ಆಗಿದೆಯಾ ನೋಡಿ incometax.gov.in lncometax.in / incometax-india.com
https:// ಮತ್ತು ಬೀಗದ ಚಿಹ್ನೆ ಇದೆಯಾ ನೋಡಿ Address bar ನಲ್ಲಿ ಬೀಗದ ಚಿಹ್ನೆ ಕಾಣಿಸುತ್ತೆ http:// ಮಾತ್ರ ಇರುತ್ತೆ, ಬೀಗ ಇರಲ್ಲ
Google ನಲ್ಲಿ ಹುಡುಕೋ ಬದಲು ನೇರ ಟೈಪ್ ಮಾಡಿ Browser ಬಾರ್‌ನಲ್ಲಿ incometax.gov.in ನೇರ ಟೈಪ್ ಮಾಡಿ Google Ads ಮೇಲೆ ಕ್ಲಿಕ್ ಮಾಡಬೇಡಿ
WhatsApp / SMS ಲಿಂಕ್ ಬಂದ್ರೆ ಸರ್ಕಾರ ಎಂದೂ ಲಿಂಕ್ ಕಳುಹಿಸಲ್ಲ ಲಿಂಕ್ ಬಂದ್ರೆ 100% ಮೋಸ
ಫೋನ್ ನಂಬರ್ / OTP ಕೇಳ್ತಾರಾ? ಅಸಲಿ ಸೈಟ್ ಎಂದೂ OTP / ಪಾಸ್‌ವರ್ಡ್ ಕೇಳಲ್ಲ OTP / ಪಾಸ್‌ವರ್ಡ್ ಕೇಳ್ತಾರೆ — ಕೊಡಬೇಡಿ
ಒಂದೇ ಒಂದು ನಿಯಮ ನೆನಪಿಡಿ gov.in = ಸರ್ಕಾರಿ, ನಂಬಬಹುದು ಬೇರೆ ಯಾವ domain ಆದ್ರೂ — ದೂರ ಇರಿ

ಯಾವೆಲ್ಲ ಇನ್ಫಾರ್ಮಶನ್ ಗಳನ್ನು ಕದಿಯುತ್ತಾರೆ? 

  • ನಿಮ್ಮ OTPs
  • Banking information
  • SMS messages
  • Contacts
  • Device information
  • ನಿಮ್ಮ sensitive data (depending on the malware’s permissions)

ಯಾಕೆ ಈ ಟ್ಯಾಕ್ಸ್ ಸೀಸನ್ ಅನ್ನು ಆಯ್ಕೆ ಮಾಡಿದ್ದಾರೆ?

ಒಂದು ರೀತಿಯ ಸೈಕಾಲಜಿ ಗೇಮ್ ಯಾಕಂದರೆ ಇಂತಹ ಸಂದರ್ಭದಲ್ಲಿ ಮನುಷ್ಯರು ಆತಂಕ ಗೊಳ್ಳುವುದು ಸರ್ವೆ ಸಾಮಾನ್ಯ ಯಾಕಂದರೆ ಟ್ಯಾಕ್ಸ್ ಕಟ್ಟಬೇಕು, ಇದರ ಗಡುವು ಮೀರಿದರೆ ಮತ್ತೆ ಸಂಕಷ್ಟ ಬರುವುದು ಎಂಬ ಯೋಚನೆಯಲ್ಲಿ ಇರುತ್ತಾರೆ.

ಇಂತಹ ಸಂದರ್ಭಗಳನ್ನು ಬಳಸಿಕೊಂಡು ಫೇಕ್ ವಾಟ್ಸಪ್ ಮೆಸೇಜ್ ಗಳನ್ನು ಕಳುಹಿಸಲಾಗುತ್ತದೆ. ಆಗ ಜನರು ಇದನ್ನು ನಂಬಿ ತಮ್ಮ ಡೇಟಾಗಳನ್ನು ಅಲ್ಲಿ ಹಾಕಿ ಬಿಡುತ್ತಾರೆ.

Note: ಆದರೆ ಒಂದು ಗಮನದಲ್ಲಿ ಇರಲಿ ಸರ್ಕಾರ ಯಾವುದೇ ರೀತಿಯ ಇನ್ಕಮ್ ಟ್ಯಾಕ್ಸ್ ಮೆಸೇಜ್ ಗಳನ್ನು ವಾಟ್ಸಾಪ್ ಮೂಲಕ ಗ್ರಾಹಕರಿಗೆ ಎಂದಿಗೂ ಕಳುಹಿಸುವುದಿಲ್ಲ.

ಗ್ರಾಹಕರು ಹೇಗೆ ಇದರಿಂದ ಎಚ್ಚೆತ್ತುಕೊಳ್ಳಬೇಕು?

  • ಟ್ಯಾಕ್ಸ್ ಫಾರ್ಮ್ಗಳನ್ನು ಡೌನ್ಲೋಡ್ ಮಾಡಬೇಕಂತಿದ್ದರೆ ನೀವು ಸರ್ಕಾರದ incometax.gov.in/iec/foportal/ ವೆಬ್ಸೈಟ್ ಗಳಿಗೆ ಹೋಗಿ ಡೌನ್ಲೋಡ್ ಮಾಡಿಕೊಳ್ಳಿ ಯಾವುದೇ ರೀತಿಯ ಅನ್ಯ ವೆಬ್ಸೈಟ್ ಗಳಲ್ಲಿ ಡೌನ್ಲೋಡ್ ಮಾಡಲು ಹೋಗಬೇಡಿ.
  • ಯಾವುದೇ ರೀತಿಯ ಮೆಸೇಜ್ ಗಳು ಬಂದರೆ ಅದನ್ನು ಪರಿಶೀಲನೆ ಮಾಡುವುದನ್ನು ಮರೆಯಬೇಡಿ ಇದು ಗಮನದಲ್ಲಿ ಇರಲಿ.
  • APK ಫೈಲ್ ಅನ್ನು ಇನ್ಸ್ಟಾಲ್ ಮಾಡಲು ಹೋಗಬೇಡಿ. ವಾಟ್ಸಪ್ ಮೂಲಕ ಈ ರೀತಿಯ ಫೈಲ್ ಗಳು ನಿಮಗೆ ಮೆಸೇಜ್ ಮೂಲಕ ಬರಬಹುದು. 
  • ಮೆಸೇಜ್ ಮೂಲಕ ಇನ್ಕಮ್ ಟ್ಯಾಕ್ಸ್ ಪರಿಶೀಲನೆ ಮಾಡಿ ಎಂಬ ಲಿಂಕ್ ಗಳು ಬಂದರೆ ಆ ರೀತಿ ವೆಬ್ಸೈಟ್ಗಳಿಗೆ ವಿಸಿಟ್ ಮಾಡಲು ಹೋಗಬೇಡಿ ತಕ್ಷಣ ಆ ಲಿಂಕ್ ಗಳನ್ನು ರಿಪೋರ್ಟ್ ಮಾಡಿ.

ಒಂದು ವೇಳೆ ಡೌನ್ಲೋಡ್ ಮಾಡಿದರೆ ಏನು ಮಾಡಬೇಕು

  • ತಕ್ಷಣ ನಿಮ್ಮ ಮೊಬೈಲ್ ಅನ್ನು ಇಂಟರ್ನೆಟ್ ಇಂದ ಡಿಸ್ಕನೆಕ್ಟ್ ಮಾಡಿ.
  • ಇನ್ಸ್ಟಾಲ್ ಆಗಿರುವ APK ಫೈಲ್ ಅನ್ನು ನಿಮ್ಮ ಮೊಬೈಲ್ ಫೈಲ್ ಮ್ಯಾನೇಜರ್ ಮೂಲಕ ಹೋಗಿ ಅಲ್ಲಿಂದ APK ಅಪ್ಲಿಕೇಶನ್ ಡಿಲೀಟ್ ಮಾಡಿ.
  • ನಿಮ್ಮ ಬ್ಯಾಂಕ್ ಪಾಸ್ವರ್ಡ್ ಗಳನ್ನು ತಕ್ಷಣ ಚೇಂಜ್ ಮಾಡಿ.
  • ತಕ್ಷಣ ನಿಮ್ಮ ಬ್ಯಾಂಕ್ ನೊಂದಿಗೆ ಸಂಪರ್ಕ ಮಾಡಿ.

 

Author

  • Sachin E Author and owner of Code Kannada

    Hi ನಾನು ಸಚಿನ್ E Web Developer and Security Tester from Karnataka, currently working @bandwings. I regularly attends cybersecurity conferences and writes everything I learn — in Kannada, for free.

Knowledge becomes more valuable when it is shared

CodeKannada ಜೊತೆ Connect ಆಗಿ

ಹೆಚ್ಚಿನ articles, updates ಮತ್ತು Career tips ಗಾಗಿ join ಆಗಿ