ನೀವೇನಾದರೂ ನಿಮ್ಮ ದಿನನಿತ್ಯದ ಸಣ್ಣ ಪುಟ್ಟ ಕೆಲಸಕ್ಕೆ Claude AI ಟೂಲ್ ಬಳಸುತ್ತಿದ್ದೀರಾ? ನಿಮ್ಮ Shared Chat ಡೇಟಾ ಲೀಕ್ ಆಗಿರುವ ಸಾಧ್ಯತೆಗಳು ಬಹಳ ಹೆಚ್ಚಾಗಿ ಕಂಡು ಬಂದಿದೆ.
ಬಂದಿರುವ ವರದಿಗಳ ಪ್ರಕಾರ ಈ Claude AI ಟೂಲ್ ಬಳಸಿಕೊಂಡು ನೀವೇನು Shared Chat ಮಾಡಿದ್ದೀರಾ ಅದು ಈಗ ಗೂಗಲ್ ನಲ್ಲಿ ಇಂಡೆಕ್ಸ್ ಆಗಿದ್ದಾವೆ.
ಇಂಡೆಕ್ಸ್ ಅಂದರೆ ಗೂಗಲ್ ಪ್ರತಿ ವೆಬ್ಸೈಟ್ ಗಳನ್ನು Crawl ಮಾಡುತ್ತಲೇ ಇರುತ್ತದೆ.
ಅದೇ ಸಂದರ್ಭದಲ್ಲಿ ನೀವು ಬಳಸುವ ಈ Claude AI ಟೂಲ್ ಏನಿದೆ ಅದರಲ್ಲಿರುವ ವಿಷಯಗಳನ್ನು ಕೂಡ Crawl ಮಾಡಿ ತನ್ನದೇ ಆದ ಡೇಟಾಬೇಸಿನಲ್ಲಿ ಸ್ಟೋರ್ ಮಾಡಿಕೊಂಡಿದೆ.
site:claude.ai/public/artifacts
ಈ ಒಂದು ಗೂಗಲ್ Dork ಮೂಲಕ ನೀವು ಲೀಕಾಗಿರುವ Shared ಚಾಟ್ ಅನ್ನು ನೋಡಬಹುದು.
ಯಾವ ರೀತಿ ಈ Shared ಚಾಟ್ ಗಳು ಲೀಕ್ ಆದವು
ನೀವೆಲ್ಲರೂ Claude ಬಳಸುತ್ತಿರುತ್ತೀರಾ ಅದರಲ್ಲಿ ಒಂದು ವಿಶೇಷವಾದ ಫೀಚರ್ ಇದೆ ಅದು ಏನೆಂದರೆ ನೀವು ನಿಮ್ಮ ಚಾಟ್ಗಳನ್ನು ಮತ್ತೊಬ್ಬರಿಗೆ ಶೇರ್ ಮಾಡಬಹುದು.
ಈ ಒಂದು Data ಲೀಕ್ ಏನಿದೆ ಅದು ಶುರುವಾದದ್ದು ಈ Feature ಇಂದನೆ ಅಂತ ಹೇಳಬಹುದು.
ಯಾರು ಬೇಕಾದರೂ ಈ ಲಿಂಕನ್ನು ಬಳಸಿಕೊಂಡು ನೀವು ಚಾಟ್ ಮಾಡಿರುವ ವಿಷಯಗಳನ್ನು ನೋಡಬಹುದು. ಆದರೆ ಇಲ್ಲಿ ಏನಾಗಿದೆ ಎಂದರೆ ಈ ಚಾಟ್ ಲಿಂಕ್ ಏನಿದೆ ಅದು ಗೂಗಲ್ ನಲ್ಲಿ ಇಂಡೆಕ್ಸ್ ಆಗಿದೆ ಈ ಕಾರಣದಿಂದ ನಿಮ್ಮ ಎಲ್ಲಾ ಚಾಟ್ಗಳು ಗೂಗಲ್ ನಲ್ಲಿ ಲಭ್ಯವಿದೆ.
ಹೇಗೆ ನಿಮ್ಮ ಚಾಟ್ ಗಳನ್ನು ಗೂಗಲ್ Index ಮಾಡಿದ್ದೆ?
ಗೂಗಲ್ Bot ಸಾಮಾನ್ಯವಾಗಿ ತನಗೆ ಸಿಗುವ ಎಲ್ಲಾ ಲಿಂಕ್ ಗಳನ್ನು ಕ್ರಾಲ್ (crawl) ಮಾಡುತ್ತಲೇ ಇರುತ್ತದೆ ನಂತರ ಎಲ್ಲಾ ಪೇಜ್ ಗಳನ್ನು ತನ್ನದೇ ಆದ Data ಬೇಸ್ ಗಳಲ್ಲಿ ಸ್ಟೋರ್ ಮಾಡುತ್ತಾ ಹೋಗುತ್ತಿರುತ್ತದೆ.
ಇದೇ ಗೂಗಲ್ Bot ಪ್ರತಿನಿತ್ಯ ಮಾಡುವ ಕೆಲಸ
ತನ್ನ ದಿನ ನಿತ್ಯದ ಕೆಲಸ ಮಾಡುವಾಗ ಗೂಗಲ್ ಬಾಟ್ ಏನಿದೆ ಅದಕ್ಕೆ ಈ ಒಂದು ಲಿಂಕ್ Claude ಕಡೆಯಿಂದ ಲಭ್ಯವಾಗಿದೆ. ಅದೇ ಕಾರಣದಿಂದ ಎಲ್ಲಾ Shared chat ಗೂಗಲ್ ನಲ್ಲಿ ಇಂಡೆಕ್ಸ್ ಆಗಿದೆ.

ಗೂಗಲ್ Bot ಪೇಜ್ ಗಳನ್ನು ಇಂಡೆಕ್ಸ್ ಮಾಡಬಾರದು ಅಂದರೆ ನಾವು ಈ ಒಂದು robots.txt ಪೇಜ್ ಮೂಲಕ ಗೂಗಲ್ Bot ಏನಿದೆ ಅದಕ್ಕೆ ತಿಳಿಸಬೇಕು ಆಗ ಮಾತ್ರ ಗೂಗಲ್ ಬಾಟ್ ಲಿಂಕ್ ಗಳನ್ನು ಇಂಡೆಕ್ಸ್ ಮಾಡುವುದಿಲ್ಲ.
ಆದರೆ Claude ಕಂಪನಿ ಏನು ಮಾಡಿತ್ತು ಅಂದರೆ, ಈ robots.txt ಪೇಜ್ ನಲ್ಲಿ ನಿಮ್ಮ Shared ಚಾಟ್ page ಏನಿದೆ ಅದನ್ನು ಇಂಡೆಕ್ಸ್ ಮಾಡಬೇಡ ಎಂದು ಇದರಲ್ಲಿ ಸ್ಪಷ್ಟನೆ ಮಾಡಿರಲಿಲ್ಲ ಅದೇ ಕಾರಣದಿಂದ ಗೂಗಲ್ ಎಲ್ಲಾ ಲಿಂಕ್ ಗಳನ್ನು ಇಂಡೆಕ್ಸ್ ಮಾಡುತ್ತಲೇ ಹೋಗುತ್ತಾ ಇತ್ತು.
ಆದರೆ ಈಗ ಅದನ್ನು ಕಂಪನಿ robots.txt ಪೇಜಿನಲ್ಲಿ ಕಡೆಯಿಂದ ಅಪ್ ಡೇಟ್ ಮಾಡಲಾಗಿದೆ.
ಈ ಒಂದು ಲಿಂಕ್ ಮೂಲಕ ನೀವೇ ಖುದ್ದಾಗಿ ವೆರಿಫೈ ಮಾಡಬಹುದು.
ಆದರೆ ಇವರು ಅಪ್ಡೇಟ್ ಮಾಡಿದ್ದ ತಕ್ಷಣ ಗೂಗಲ್ ತನ್ನ ಡೇಟಾಬೇಸ್ ಗಳಲ್ಲಿ ಪೇಜ್ ಗಳನ್ನು ಡಿಲೀಟ್ ಮಾಡುವುದಿಲ್ಲ ಸಮಯಗಳು ತೆಗೆದುಕೊಳ್ಳುತ್ತದೆ.
ಆದ ಕಾರಣದಿಂದ ಕೆಲ ಪೇಜ್ ಗಳು ಇನ್ನು ಗೂಗಲ್ ನಲ್ಲಿ ಲಭ್ಯವಿದೆ.
ಇದನ್ನೂ ಓದಿ
Chrome ಬಳಕೆದಾರರಿಗೆ CERT-In ಎಚ್ಚರಿಕೆ: 12 ಹೊಸ Vulnerability ಪತ್ತೆ – ತಕ್ಷಣ ಹೀಗೆ ಅಪ್ಡೇಟ್ ಮಾಡಿ!