Bank of Baroda 1TB Data Leak – ನಿಮ್ಮ Branch ಸುರಕ್ಷಿತವಾಗಿದೆಯಾ ಇಲ್ಲಿ ಚೆಕ್ ಮಾಡಿ!

ನಿಮ್ಮ ಬಳಿ ಬ್ಯಾಂಕ್ ಆಫ್ ಬರೋಡ ಅಕೌಂಟಿದ್ದರೆ ಎಚ್ಚರ! ಕೋಟ್ಯಾಂತರ ಬಳಕೆದಾರರ ಡೀಟೇಲ್ಸ್ ಗಳು Hack ಹಾಗಿದೆ ಎಂಬ ಮಾಹಿತಿ ತಿಳಿದಿದೆ.

ಸರಿ ಸುಮಾರು ಒಂದು TB (1Terabyte) ಡೆಟಗಳನ್ನು ಈಗ Dark Web ನಲ್ಲಿ ಲೀಕ್ ಮಾಡಲಾಗಿದೆ. 

1TB ಅಂದರೆ 1000 GB

Bank Of Baroda ಅಫೀಷಿಯಲ್ ಟ್ವೀಟ್

ಇದರ ಬಗ್ಗೆ ಈಗಾಗಲೇ ಬ್ಯಾಂಕ್ ಆಫ್ ಬರೋಡ ಅವರು ಮಾಹಿತಿಯನ್ನು ತಿಳಿಸಿದ್ದಾರೆ. ಬ್ಯಾಂಕಿನಲ್ಲಿ ಕೆಲಸ ಮಾಡುವ Employee ಇಮೇಲ್ ಅಕೌಂಟ್ ಮೂಲಕ Hack ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ನಂತರ ಈ ಒಂದು ದೊಡ್ಡ ಕೆಟ್ಟ ಕೃತ್ಯೆಯನ್ನು ಎಸೆಗಿದ್ದಾರೆ.

ಆದರೆ ಈಗ ಬ್ಯಾಂಕ್ ಆಫ್ ಬರೋಡ ಏನು ಮಾಹಿತಿ ನೀಡಿದ್ದಾರೆ ಎಂದರೆ ಅವರ Core Banking System (CBS) ಸೇಫ್ ಆಗಿದೆ ಎಂದು ತಿಳಿಸಿದ್ದಾರೆ.

ಯಾರು ಹಾಗೂ ಹೇಗೆ ಹ್ಯಾಕ್ ಮಾಡಲಾಗಿದೆ

ವಿವರ ಮಾಹಿತಿ
ಗುಂಪಿನ ಹೆಸರು Triple X (TripleX / TX)
ಪ್ರಕಾರ ರಾನ್ಸಂವೇರ್ / ಡೇಟಾ ಎಕ್ಸ್‌ಟಾರ್ಷನ್ ಗುಂಪು (ಡಬಲ್ ಎಕ್ಸ್‌ಟಾರ್ಷನ್ + ಉಚಿತ ಡೇಟಾ ಲೀಕ್)
ಮೊದಲು ಕಂಡುಬಂದಿದ್ದು ಮೇ 2026 (ಸುಮಾರು)
ಮುಖ್ಯ ಗುರಿ ಏಷ್ಯಾ-ಪೆಸಿಫಿಕ್‌ನ ದೊಡ್ಡ ಬ್ಯಾಂಕ್‌ಗಳು (ವಿಶೇಷವಾಗಿ ಸರ್ಕಾರಿ ಬ್ಯಾಂಕ್‌ಗಳು)
ಹಿಂದಿನ ದಾಳಿ ಇಂಡೋನೇಷ್ಯಾದ PT Bank Negara Indonesia (BNI) – ಸುಮಾರು 2 TB ಡೇಟಾ (ಮೇ 2026)
ಇತರ ತಿಳಿದಿರುವ ಬಲಿಪಶು ಅಮೆರಿಕದ ಒಂದು ಇಮಿಗ್ರೇಷನ್ ಲಾ ಫರ್ಮ್ (ಸುಮಾರು 1.5 TB)
ಕಾರ್ಯವಿಧಾನ ದುರ್ಬಲ ಪಾಸ್‌ವರ್ಡ್ ಮೂಲಕ ಪ್ರವೇಶ; ಸಂಪೂರ್ಣ ಡೇಟಾ Tor ಸೈಟ್‌ನಲ್ಲಿ ಉಚಿತವಾಗಿ ಬಿಡುಗಡೆ
ಪ್ರೇರಣೆ ಹಣಕಾಸು ಲಾಭ (ಫೈನಾನ್ಷಿಯಲಿ ಮೋಟಿವೇಟೆಡ್)
ಲೀಕ್ ಸೈಟ್ Tor ಆನಿಯನ್ ಸೇವೆ (ಯಾವುದೇ ದೃಢೀಕರಣ ಇಲ್ಲದೆ ಸಾರ್ವಜನಿಕ)
ಸ್ಥಿತಿ ಹೊಸ ಮತ್ತು ಸಕ್ರಿಯ ಗುಂಪು; ಏಷ್ಯಾ ಬ್ಯಾಂಕ್‌ಗಳ ಮೇಲೆ ವಿಶೇಷ ಗಮನ

ಬಳಕೆದಾರರ ಯಾವೆಲ್ಲಾ ಡೀಟೇಲ್ಸ್ ಗಳು ಹ್ಯಾಕ್ ಹಾಗಿದೆ?

ಕ್ರ.ಸಂ. ಹ್ಯಾಕ್ ಆಗಿರುವ ಮಾಹಿತಿ
1 ಗ್ರಾಹಕರ ಹೆಸರುಗಳು
2 ಮೊಬೈಲ್ ಫೋನ್ ಸಂಖ್ಯೆಗಳು
3 ಆಧಾರ್ ಸಂಖ್ಯೆಗಳು
4 ಉಳಿತಾಯ ಮತ್ತು ಪ್ರಸ್ತುತ ಖಾತೆ ದಾಖಲೆಗಳು
5 ನೆಟ್‌ಬ್ಯಾಂಕಿಂಗ್ ಬಳಕೆದಾರರ ದಾಖಲೆಗಳು
6 ಸಾಲದ ಮಾಹಿತಿ ಮತ್ತು ಅಪ್ರೈಸಲ್ ದಾಖಲೆಗಳು
7 ಎನ್‌ಆರ್‌ಐ ಮತ್ತು ಕಾರ್ಪೊರೇಟ್ ಬ್ಯಾಂಕಿಂಗ್ ದಾಖಲೆಗಳು
8 ಗ್ರಾಹಕ ಬೆಂಬಲ ಮಾಹಿತಿ
9 ಶಾಖೆ ಮತ್ತು ATM ಸಂಬಂಧಿತ ದಾಖಲೆಗಳು
10 ಗ್ರಾಹಕ ಅರ್ಜಿ ನಮೂನೆಗಳು (ಫೋಟೋ, UID ಸಹಿತ)
11 KYC ಮತ್ತು ಗುರುತಿನ ದಾಖಲೆಗಳು
12 ಶಾಖೆ ಆಡಿಟ್ ರಿಪೋರ್ಟ್‌ಗಳು
13 ಕಾಂಪ್ಲೈಯನ್ಸ್ ಮತ್ತು ವಿಜಿಲೆನ್ಸ್ ತನಿಖಾ ದಾಖಲೆಗಳು
14 ಆಂತರಿಕ ಸುರಕ್ಷತೆ ಮತ್ತು bobWorld ಆಡಿಟ್ ದಾಖಲೆಗಳು
15 ಸುಮಾರು 1 TB ಡೇಟಾ (ಸುಮಾರು 92,000+ ಫೈಲ್‌ಗಳು)

ಈ ರೀತಿ ನಿಮ್ಮ ಡೇಟಾ ಗಳನ್ನು ಶೇರ್ ಮಾಡಲಾಗಿದೆ

ನಿಮ್ಮ ಅಕೌಂಟ್ ಇದ್ದರೆ ಈ ಕೆಲಸ ಮಾಡಿ

  • ಯಾವುದೇ ರೀತಿಯ ಕರೆಗಳು ನಿಮಗೆ ಬ್ಯಾಂಕ್ ಕಡೆಯಿಂದ ಬಂದರೆ ಅದನ್ನು ಸ್ವೀಕರಿಸಲು ಹೋಗಬೇಡಿ. ಯಾಕೆಂದರೆ ಅವರು ಬ್ಯಾಂಕಿನವರಾಗಿರುವುದಿಲ್ಲ.
  • ನಿಮಗೆ ಯಾವುದಾದರೂ ವಾಟ್ಸಪ್ ಮೆಸೇಜ್ ಹಾಗೂ ಫೈಲ್ಸ್ ಗಳು ಬಂದರೆ ಡೌನ್ಲೋಡ್ ಮಾಡಬೇಡಿ.
  • ಬ್ಯಾಂಕ್ ಸಿಬ್ಬಂದಿಗಳು ನಿಮಗೆ ಯಾವುದೇ ಫೋನ್ ಕಾಲ್ ಮಾಡುವುದಿಲ್ಲ.
  • ಯಾವುದೇ ರೀತಿಯ OTP ಹಾಗು MPINs ಕೇಳಿದರೆ ಅದನ್ನು ಕೊಡಲು ಹೋಗಬೇಡಿ. 
ತಕ್ಷಣದ ತಿಳಿದುಕೊಳ್ಳಬೇಕಾದ ಕ್ರಮಗಳು
ಕ್ರ.ಸಂ.ವಿವರಗಳು
1ನಿಮ್ಮ ಬ್ಬ್ರಾಂಚ್ IFSC ಕೋಡ್ ಬಳಸಿ ಪರಿಶೀಲಿಸಿ – ಡಂಪ್‌ನಲ್ಲಿದೆಯೇ ಎಂದು ನೋಡಿ
2ಎಲ್ಲಾ BoB ಖಾತೆಗಳಲ್ಲಿ Transaction alert ಆನ್ ಮಾಡಿಕೊಳ್ಳಿ – ಪ್ರತಿ ಡೆಬಿಟ್/ಕ್ರೆಡಿಟ್‌ಗೆ SMS ಮತ್ತು ಇಮೇಲ್
3ನೆಟ್ ಬ್ಯಾಂಕಿಂಗ್ ಪಾಸ್‌ವರ್ಡ್ ಬದಲಾಯಿಸಿ ಮತ್ತು 2-ಫ್ಯಾಕ್ಟರ್ Authentication ಆನ್ ಮಾಡಿಕೊಳ್ಳಿ
4bob World ಆ್ಯಪ್ PIN ನವೀಕರಿಸಿ ಮತ್ತು ಇತ್ತೀಚಿನ ಎಲ್ಲ ಡೀಟೇಲ್ಸ್ಗಳನ್ನು ಚೇಂಜ್ ಮಾಡಿ.
5ಇತ್ತೀಚಿನ ವ್ಯವಹಾರಗಳನ್ನು ಪರಿಶೀಲಿಸಿ – ಅನಧಿಕೃತ ಚಟುವಟಿಕೆ ಕಂಡುಬಂದರೆ ತಕ್ಷಣ ವರದಿ ಮಾಡಿ
6CIBIL, Experian, Equifax ನೊಂದಿಗೆ ಕ್ರೆಡಿಟ್ ರಿಪೋರ್ಟ್ ಫ್ರೀಜ್ ಮಾಡಿ – ಹೊಸ ಖಾತೆ ವಂಚನೆ ತಡೆಯಲು
ಸಂಸ್ಥೆವಿವರಗಳು
ಬ್ಯಾಂಕ್ ಆಫ್ ಬರೋಡಾ ಹೆಲ್ಪ್‌ಲೈನ್1800 258 44 55 (ಟೋಲ್-ಫ್ರೀ)
1800 1022 445 (ಟೋಲ್-ಫ್ರೀ)
RBI ಬ್ಯಾಂಕಿಂಗ್ ಓಂಬುಡ್ಸ್‌ಮನ್https://cms.rbi.org.in — ದೂರು ನೋಂದಾಯಿಸಿ
ಸೈಬರ್ ಕ್ರೈಮ್ ಪೋರ್ಟಲ್https://cybercrime.gov.in — ಗುರುತಿನ ಕಳವು ವರದಿ ಮಾಡಿ
CBI ಗೆ ವರದಿCBI FIR #RC2192025E0004 ಈಗಾಗಲೇ ದಾಖಲಾಗಿದೆ — ಸಂಬಂಧಿತ ವಂಚನೆ ವರದಿ ಮಾಡುವಾಗ ಈ ಕೇಸ್ ಉಲ್ಲೇಖಿಸಿ
CashlessConsumer ತನಿಖೆcashlessconsumer.in ನಲ್ಲಿ ಅಪ್‌ಡೇಟ್‌ಗಳನ್ನು ಅನುಸರಿಸಿ

ನಿಮ್ಮ Branch ಹ್ಯಾಕ್ ಆಗಿದಿಯಾ? ಎಂದು ಪರಿಶೀಲನೆ ಮಾಡಿ

bobbreach.cashlessconsumer.in

ಈ ಒಂದು ವೆಬ್ಸೈಟ್ ಮೂಲಕ ನಿಮ್ಮ Bank of Baroda ಬ್ರಾಂಚ್ Hack ಆಗಿದಿಯಾ ಎಂದು ಪರಿಶೀಲನೆ ಮಾಡಿ. ಬೇಗ ಪರಿಶೀಲನೆ ಮಾಡಿ. ತಡ ಮಾಡಲು ಹೋಗಬೇಡಿ. 

Author

  • Sachin E Author and owner of Code Kannada

    Hi ನಾನು ಸಚಿನ್ E Web Developer and Security Tester from Karnataka, currently working @bandwings. I regularly attends cybersecurity conferences and writes everything I learn — in Kannada, for free.

Knowledge becomes more valuable when it is shared

CodeKannada ಜೊತೆ Connect ಆಗಿ

ಹೆಚ್ಚಿನ articles, updates ಮತ್ತು Career tips ಗಾಗಿ join ಆಗಿ