ಹಾಯ್ ಹಲೋ! ಈ ನಮ್ಮ ಹೊಸ Code Kannada ವೆಬ್ ಸೈಟಿನ ಮೊದಲನೇ ಬ್ಲಾಗ್ ಪೋಸ್ಟ್ ಏನಿದೆ ಅದಕ್ಕೆ ಎಲ್ಲರಿಗೂ ಸ್ವಾಗತ. Bsides Bangalore ಮುಂದಿನ ತಿಂಗಳು ಅಂದರೆ ಜುಲೈ ತಿಂಗಳಿನಲ್ಲಿ ಅತಿ ದೊಡ್ಡ Annual Cyber Security Conference Event ಇಟ್ಟುಕೊಂಡಿದ್ದಾರೆ.
ಸೆಕ್ಯೂರಿಟಿ Bsides ಎನ್ನುವ ಒಂದು ಸಂಸ್ಥೆ ಅಮೆರಿಕದಲ್ಲಿ 2009 ರಲ್ಲಿ ಸ್ಥಾಪನೆಯಾಗಿತ್ತು. ಈಗ ಈ ಸಂಸ್ಥೆ 210 ಸಿಟಿಗಳಲ್ಲಿ ವಿವಿಧ ರೀತಿಯ Bsides ಕಮ್ಯುನಿಟಿಗಳನ್ನು ಸ್ಥಾಪನೆ ಮಾಡಿಕೊಂಡಿದ್ದಾರೆ. ಅದರಲ್ಲಿ ನಮ್ಮ ಬೆಂಗಳೂರಿನ ಈ Bsides Bangalore ಕೂಡ ಒಂದು.
ಈ ಒಂದು ಸಂಸ್ಥೆಯ ಮುಖ್ಯ ಉದ್ದೇಶ ಏನೆಂದರೆ? ಪ್ರಪಂಚದಾದ್ಯ ಸೈಬರ್ ಸೆಕ್ಯೂರಿಟಿ ಸ್ಟೂಡೆಂಟ್ಸ್ ಗಳು ಹಾಗೂ ಸೆಕ್ಯೂರಿಟಿ ಇಂಜಿನಿಯರ್ಸ್ ಗಳು ಏನಿದ್ದಾರೆ ಅವರಿಗೆ ಒಂದು ಕಮ್ಯುನಿಟಿ ರೀತಿಯ ಪ್ಲಾಟ್ಫಾರ್ಮ್ ನೀಡಬೇಕು ಎಂಬುದು ಈ ಸಂಸ್ಥೆಯ ಮುಖ್ಯ ಉದ್ದೇಶ.
ಈ ವಿಷಯಗಳ ಬಗ್ಗೆ ಚರ್ಚೆ ಮಾಡುತ್ತಾರೆ:
- Technical security talks
- Technical hands-on workshops
- CTF – (Capture the flag)
- Panel Discussions
- Security Threat
- Mitigation Strategies
ವಿದ್ಯಾರ್ಥಿಗಳು Bsides Bangalore ಇವೆಂಟ್‌ಗೆ ಯಾಕೆ ಹೋಗಬೇಕು?
ಕಳೆದ ವರ್ಷ Bsides ಬೆಂಗಳೂರು 11 July 2025 ರಂದು ಕಾನ್ಫರೆನ್ಸ್ Event ನಡೆಸಿದರು ಅದರಲ್ಲಿ ನಾನು ಕೂಡ ಭಾಗಿಯಾಗಿದ್ದೆ. ಇದು ನನ್ನ ಮೊದಲನೆಯ ಕಾನ್ಫರೆನ್ಸ್ ಆಗಿತ್ತು, ಇಲ್ಲಿ ನಾನು ಕಲಿತದ್ದು ಬಹಳ ಇದೆ.

ಇವೆಂಟ್ ನಲ್ಲಿ ಬಹಳ ದೊಡ್ಡ ದೊಡ್ಡ ಗಣ್ಯ ವ್ಯಕ್ತಿಗಳು ಇರುತ್ತಾರೆ. ಕೆಲವರ ಚಿತ್ರಗಳು ಇಲ್ಲಿದೆ ನೋಡಿ:

ಇಲ್ಲಿರುವ ಪ್ರತಿ ವ್ಯಕ್ತಿಗಳು ಸೈಬರ್ ಸೆಕ್ಯೂರಿಟಿ ಇಂಡಸ್ಟ್ರಿಯಲ್ಲಿ ಸಾಧನೆ ಮಾಡಿದವರು ಹಾಗೂ ಇವರಿಂದ ನೀವು ಕಲಿಯುವುದು ಬಹಳಷ್ಟು ಇದೆ. ಈ ವರ್ಷ ಕೂಡ ನೀವು ಈ ಕಾನ್ಫರೆನ್ಸ್ ಗೆ ಅಟೆಂಡ್ ಮಾಡಿದರೆ ಇವರೆಲ್ಲರನ್ನು ಮೀಟ್ ಮಾಡುವ ಅವಕಾಶ ನಿಮಗೆ ಸಿಗುತ್ತದೆ. ಅದರಲ್ಲಿ ಕೂಡ “Dr. Ram Kumar G” ಸರ್ ಅವರನ್ನು ಮಿಸ್ ಮಾಡದೆ ಮೀಟ್ ಮಾಡುವುದನ್ನು ಮರೆಯಬೇಡಿ.
ಅವರ LinKedin ಪೇಜ್ ಬಯೋ ಇಲ್ಲಿ ನೀಡಿರುತ್ತೇನೆ:
Dr. Ram Kumar G, Ph.D, CISM, PMP
ಈ ಕಾನ್ಫರೆನ್ಸ್ ನಲ್ಲಿ ಸುಮಾರು ಒಂದು ಸಾವಿರದಿಂದ ಎರಡು ಸಾವಿರದವರೆಗೆ ಸ್ಟೂಡೆಂಟ್ಸ್ ಗಳು ಹಾಗೂ ಸೆಕ್ಯೂರಿಟಿ ರಿಸರ್ಚಸ್ ಅಟೆಂಡ್ ಆಗಿರುತ್ತಾರೆ. ಇದರಲ್ಲಿ ನೀವು ಬಹಳಷ್ಟು ಜನರೊಂದಿಗೆ ಸಂಪರ್ಕ ಮಾಡಬಹುದು ಹಾಗೂ ಅವರಿಂದ ಸೈಬರ್ ಸೆಕ್ಯೂರಿಟಿ ವಿಷಯಗಳನ್ನು ತಿಳಿದುಕೊಳ್ಳಬಹುದು.
ಪ್ರತಿ 2 ಗಂಟೆಗೆ ಅಥವಾ 3 ಗಂಟೆಗೆ ನೆಟ್ವರ್ಕಿಂಗ್ ಬ್ರೇಕ್ ಬಿಡಲಾಗುತ್ತದೆ. ಅಲ್ಲಿ ಹಲವಾರು ವ್ಯಕ್ತಿಗಳನ್ನು ನೀವು ಮೀಟ್ ಆಗಬಹುದು ಹಾಗೂ ಅವರ ಬಳಿ ಮಾತನಾಡಿ ಕನೆಕ್ಟ್ ಆಗಬಹುದು.
ಕಳೆದ ವರ್ಷ Conference ಇವೆಂಟ್ ಯಾವ ರೀತಿ ನಡೆಸಿದರು ಹಾಗೂ ಯಾರೆಲ್ಲಾ ಈ ಕಾನ್ಫರೆನ್ಸ್ ನಲ್ಲಿ ಭಾಗಿಯಾಗಿದ್ದರು ಇದನ್ನೆಲ್ಲ ನೀವು ನೋಡಬೇಕೆಂದರೆ?
ಈ ಒಂದು ಗ್ಯಾಲರಿ ಮೂಲಕ ಎಲ್ಲಾ ವಿಷಯಗಳನ್ನು ನೀವು ತಿಳಿದುಕೊಳ್ಳಬಹುದು. ಇದು ನಿಮಗೆ ಈ ವರ್ಷ Bsides Bangalore 2026 event ಯಾವ ರೀತಿ ಅಟೆಂಡ್ ಮಾಡಬೇಕು ಎಂಬುದರ ಬಗ್ಗೆ ಒಂದು ಐಡಿಯಾ ಸಿಗುತ್ತದೆ.
Bsides Bangalore ಈ ಸಂಸ್ಥೆ ನಡೆಸುತ್ತಿರುವ ಟೀಮ್ ನೀವು ನೋಡಬೇಕೆಂದರೆ ಇಲ್ಲಿ ನೋಡಬಹುದು:
ಈ ವರ್ಷ ಇವೆಂಟ್ ಅಟೆಂಡ್ ಮಾಡುವ ಮುನ್ನ ಇವರ ಟೀಮ್ ಮೆಂಬರ್ಸ್ ಯಾರು ಇದ್ದಾರೆ ಎಂಬುದನ್ನು ಮೊದಲು ನೋಡಿಕೊಳ್ಳಿ ಹಾಗು ಅವರ LinKedin ಪೇಜ್ ಗಳನ್ನು ಫಾಲೋ ಮಾಡಿ.
Bsides ಬೆಂಗಳೂರು ಇವೆಂಟ್ Highlights
ಈ ವರ್ಷ ಕೂಡ ಕಾರ್ಯಕ್ರಮವನ್ನು ಇದೇ ರೀತಿ ನಡೆಸಿಕೊಡಲಾಗುತ್ತದೆ. ಮೊದಲಿಗೆ ಓಪನಿಂಗ್ Ceremony ಮಾಡಲಾಗುತ್ತದೆ, ಕಳೆದ ವರ್ಷ ಚೀಫ್ ಗೆಸ್ಟ್ ಆಗಿ ಓಪನಿಂಗ್ Ceremony ಯಲ್ಲಿ Yaduveer Krishnadatta Chamaraja Wadiyar ಹಾಗೂ ಅವರ ಧರ್ಮಪತ್ನಿ Smt Trishikha Kumari Wadiyar ಭಾಗಿಯಾಗಿದ್ದರು.
ಇಡೀ ದಿನ ಈ ಒಂದು ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಒಂದು ಇಂಪ್ಯಾಕ್ಟ್ ಫುಲ್ ಇಂಫಾರ್ಮೇಷನ್ ಸಿಗುತ್ತದೆ ಅದು ಯಾವುದು ಎಂದರೆ:
- Technical Deep-dives
- Hands on Workshops
- Red Teaming
- Panel Discussion
- Cyber Security Defence
- Threat Modeling
- CXO Panel Discussion
- CXO roundtable
- Strategy Sessions
- Security Challenges

ವಿದ್ಯಾರ್ಥಿಗಳಿಗೆ ಲಂಚ್, ಕಾಫಿ ಹಾಗೂ ಸ್ನಾಕ್ಸ್ ಗಳನ್ನು ಅನ್ಲಿಮಿಟೆಡ್ ಆಗಿ ನೀಡಲಾಗುತ್ತದೆ.
ದೊಡ್ಡ ದೊಡ್ಡ ಕಂಪನಿಗಳು ಕೂಡ ಬಂದಿರುತ್ತವೆ, ಕಳೆದ ವರ್ಷ ನಾನು ಅಟೆಂಡ್ ಮಾಡಿದಾಗ ಗೂಗಲ್ ಕಂಪನಿ ಬಂದಿತ್ತು. ಹಾಗೂ ಸೈಬರ್ ಸೆಕ್ಯೂರಿಟಿ ಕಂಪನಿಯಲ್ಲಿ ಕೆಲಸ ಮಾಡುವವರು ಕೂಡ ಇರುತ್ತಾರೆ.
ಇವರ ಬಳಿ ನೀವು ಮಾತನಾಡಿ ನಿಮ್ಮ ಭವಿಷ್ಯದ ಸೈಬರ್ ಸೆಕ್ಯೂರಿಟಿ ಡ್ರೀಮ್ ಏನಿದೆ ಅದನ್ನು ಯಾವ ರೀತಿ ಸ್ಟಾರ್ಟ್ ಮಾಡುವುದು ಎಂಬುದನ್ನು ಕೂಡ ಇವರ ಬಳಿ ಕೇಳಬಹುದು. ನೀವು ರೆಸುಮೆ Build ಮಾಡುತ್ತಿದ್ದರೆ ಯಾವ ರೀತಿ ಬಿಲ್ಡ್ ಮಾಡಬೇಕು ಎಂಬುವುದರ ಬಗ್ಗೆ ಇವರ ಬಳಿ ಸಲಹೆ ಕೇಳಬಹುದು.
ಯಾರೆಲ್ಲ ಈ ಕಾನ್ಫರೆನ್ಸ್ ಅಟೆಂಡ್ ಮಾಡಬಹುದು
- ನೀವು Students ಆಗಿದ್ದರೂ ಕೂಡ ಈ ಕಾನ್ಫರೆನ್ಸ್ ಅಟೆಂಡ್ ಮಾಡಬಹುದು.
- ಡೆವಲಪರ್ಸ್ ಆಗಿದ್ದರು ಅಟೆಂಡ್ ಮಾಡಬಹುದು.
- ಸೆಕ್ಯೂರಿಟಿ ರಿಸರ್ಚ್ ಆಗಿದ್ದರು ಅಟೆಂಡ್ ಮಾಡಬಹುದು.
- ಐಟಿ ಪ್ರೊಫೆಷನಲ್ ಆಗಿದ್ದರು ಅಟೆಂಡ್ ಮಾಡಬಹುದು.
- ಸೈಬರ್ ಸೆಕ್ಯೂರಿಟಿಯಲ್ಲಿ ಹೊಸದಾಗಿ ಹೆಜ್ಜೆ ಇಡುತ್ತಿರುವವರು ಕೂಡ ಅಟೆಂಡ್ ಮಾಡಬಹುದು.
ಈ ಒಂದು ಇವೆಂಟಿನಲ್ಲಿ ಯಾವುದೇ ರೀತಿಯ Restrictions ಇರುವುದಿಲ್ಲ
ಇಂತವರೇ ಈ conference event ನಲ್ಲಿ ಭಾಗಿಯಾಗಬೇಕು ಎಂದು ಯಾವುದೇ Guidelines ಇಲ್ಲಿ ಇರುವುದಿಲ್ಲ.
ಈ ಕಾನ್ಫರೆನ್ಸ್ ಎಲ್ಲರಿಗೂ ಅವಕಾಶ ಮಾಡಿಕೊಡುತ್ತದೆ ಅದೇ ಈ Bsides Bangalore conference ಇವೆಂಟಿನ ವಿಶೇಷ.
ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಇದರಲ್ಲಿ ಭಾಗಿಯಾಗಿ ವಿಷಗಳನ್ನು ತಿಳಿದುಕೊಳ್ಳಬಹುದು.
ಇವೆಂಟ್ Location ಹಾಗು Timings
| Event Name | Annual Cyber Security Conference 2026 #ACSC2026 |
| Date | 09-Jul-2026 |
| Location | Sheraton Grand Whitefield Hotel & Convention Center Prestige Shantiniketan, Hoodi, Whitefield |
| Maps | “Sheraton Grand Whitefield Bangalore” ಅಂತ Google Maps ಅಲ್ಲಿ ಸರ್ಚ್ ಮಾಡಿ ನಿಮಗೆ exact pin ಸಿಗುತ್ತದೆ. |
| Registration Link | bsidesbangalore |
| 2026 Conference Schedule | bsidesbangalore.in/schedule |
Bsides ಬೆಂಗಳೂರು ಇವೆಂಟ್ ರಿಜಿಸ್ಟರ್ ಆಗುವುದು ಹೇಗೆ?
ಮೊದಲಿಗೆ ನೀವು Bsides ಬೆಂಗಳೂರು community ಸಂಸ್ಥೆಯ ಮೆಂಬರ್ ಆಗಬೇಕು ಇದು ಬಹಳ ಸುಲಭ ಇದಕೆ ನೀವು ಯಾವುದೇ ರೀತಿಯ ಹಣ ಕಟ್ಟುವಂತಿಲ್ಲ ಎಲ್ಲರಿಗೂ ಇದು ಉಚಿತ.
bsidesbangalore.in/registermember
ಈ ಒಂದು ಲಿಂಕ್ ಕ್ಲಿಕ್ ಮಾಡಿ ನಂತರ ನಿಮಗೆ ಅಫೀಷಿಯಲ್ ಪೇಜ್ ಓಪನ್ ಆಗುತ್ತದೆ. ಅಲ್ಲಿ ನೀವು ಮೊದಲು ರಿಜಿಸ್ಟರ್ ಆಗಬೇಕು ಅಂದರೆ ಮೆಂಬರ್ ಆಗಬೇಕು.
ಮೆಂಬರ್ ಆಗಲು ಈ ದಾಖಲೆಗಳನ್ನು ನೀವು ಭರ್ತಿ ಮಾಡಬೇಕು:
- Name
- Title
- Company
- Location
- Phone Number
- Personal Email
- Office Email
- LinkedIn URL
ನಂತರ ನಿಮಗೆ ಗ್ರೂಪ್ ಟೈಪ್ ಎಂದು ಆಪ್ಷನ್ ಕಾಣುತ್ತದೆ ಅಲ್ಲಿ ಎರಡು Types ನೀವು ನೋಡಬಹುದು ಇದರಲ್ಲಿ ನೀವು BSides Bangalore ಟೈಪ್ ಸೆಲೆಕ್ಟ್ ಮಾಡಿ.
W3-CC (World Wide Women in Cyber Security):
ಇದು ಪ್ರತ್ಯೇಕ ಹೆಣ್ಣು ಮಕ್ಕಳಿಗಾಗಿ ಮಾಡಿರುವಂತಹ ವಿಶೇಷ ಗ್ರೂಪ್. ಸೈಬರ್ ಸೆಕ್ಯೂರಿಟಿ ಫೀಲ್ಡಿನಲ್ಲಿ ಹೆಣ್ಣು ಮಕ್ಕಳಿಗೂ ಕೂಡ ಪ್ರಾಮುಖ್ಯತೆ ನೀಡಬೇಕು ಎಂಬುದು ಇವರ ಉದ್ದೇಶ.
ರಿಜಿಸ್ಟರ್ ಆದ ನಂತರ ನಿಮ್ಮ ಅಫೀಷಿಯಲ್ ಇಮೇಲ್ ಐಡಿಗೆ ಒಂದು ಸಕ್ಸೆಸ್ಫುಲ್ ಮೆಂಬರ್ ಆಗಿದ್ದೀರಾ ಎಂದು E-mail ಬರುತ್ತದೆ. ಮೆಂಬರ್ ಆದರೆ ನಿಮಗೆ ಬಹಳಷ್ಟು ಬೆನಿಫಿಟ್ ಗಳು ಇದೆ ವಿದ್ಯಾರ್ಥಿಗಳೇ.
Annual Cyber Security Conference 2026 ರಿಜಿಸ್ಟ್ರೇಷನ್ ಗೈಡ್
Member registration ಆದಮೇಲೆ ನೀಡಿರುವ ಲಿಂಕ್ ಏನಿದೆ ಇದನ್ನು ಕ್ಲಿಕ್ ಮಾಡಿ:
bsidesbangalore.in/event/acsc2026/register
ಇದು ನಿಮ್ಮನ್ನು Annual Cyber Security Conference 2026 ಪೇಜ್ ಗೆ ಕರೆದುಕೊಂಡು ಹೋಗುತ್ತದೆ.
ಅಲ್ಲಿ ನಿಮಗೆ ಒಂದು ಪೇಜ್ ಹಾಗೂ Entry level Pass ಪ್ರೈಸ್ ಅಮೌಂಟ್ ಕಾಣುತ್ತದೆ.
ಇಲ್ಲಿ ನೀವು 5 ವಿವಿಧ ರೀತಿಯ Conference ಪಾಸ್ ಗಳನ್ನು ನೋಡಬಹುದು:

- Member Pass
- Non Member Pass
- Corporate Pass
- Exclusive Women Pass
- Startup Showcase Pass
ಈಗಾಗಲೇ ನೀವು ಮೆಂಬರ್ ಆಗಿದ್ದೀರಾ ಆದ್ದರಿಂದ ನೀವು ಮೆಂಬರ್ ಪಾಸ್ ಆಯ್ಕೆ ಮಾಡಿ. ರಿಜಿಸ್ಟರ್ ಕ್ಲಿಕ್ ಮಾಡಿ.
Individual Booking ಅಥವಾ Group Booking ಎಂದು ಬಟನ್ ಕಾಣುತ್ತದೆ ಅದರಲ್ಲಿ ನೀವು Individual ಬುಕಿಂಗ್ ಬಟನ್ ಅನ್ನು ಆಯ್ಕೆ ಮಾಡಿ. ನಂತರ ಇಲ್ಲಿ ಕಾಣುವ ಎಲ್ಲಾ ಡಿಟೇಲ್ಸ್ ಏನಿದೆ ಭರ್ತಿ ಮಾಡಿ
- Pass Type
- Name
- Linkedin Url
- Company
- Gender
- Designation
- Mobile No
- T-Shirt Size
ನಿಮಗೆ ಉಚಿತ ಟಿ-ಶರ್ಟ್ ಕೂಡ ನೀಡಲಾಗುತ್ತದೆ. ಅದರ ಸೈಜ್ ಅನ್ನು ನೀವು ಸೆಲೆಕ್ಟ್ ಮಾಡಬಹುದು. ಕಳೆದ ವರ್ಷ ನಮಗೂ ಕೂಡ ಟಿ-ಶರ್ಟ್ ನೀಡಿದ್ದರು.
ರಿಜಿಸ್ಟರ್ ಆದ ನಂತರ ನಿಮ್ಮ E-Mail ಐಡಿಗೆ ಒಂದು ಮೇಲ್ ಬರುತ್ತದೆ.
ಹಾಗೂ ನಿಮಗೆ ಒಂದು Member ಪಾಸ್ ನೀಡಲಾಗುತ್ತದೆ. ಆ ಪಾಸ್ ಏನಿದೆ ಅದನ್ನು ನೀವು ಜೆರಾಕ್ಸ್ ಮಾಡಿಕೊಂಡು ತೆಗೆದುಕೊಂಡು ಹೋಗಬೇಕು. ಅದನ್ನು ಅಲ್ಲಿ ಸ್ಕ್ಯಾನ್ ಮಾಡಲಾಗುತ್ತಿದೆ.
Member ಪಾಸ್ ನೋಡುವುದಕ್ಕೆ ಈ ರೀತಿ ಇರುತ್ತದೆ:

ಅಮೌಂಟ್ ಜಾಸ್ತಿ ಆಗಿಲ್ವಾ ಎಂಬ ಪ್ರಶ್ನೆ ಬರಬಹುದು?
ಒಂದು ಸಲ ನೀವು ಕಾನ್ಫರೆನ್ಸ್ ಇವೆಂಟಿಗೆ ಭೇಟಿ ಮಾಡಿ ನೋಡಿ. ನೀವು ಕಲಿಯುವ ವಿಷಯಗಳು ಹಾಗೂ ನಿಮಗೆ ಸಿಗುವ ಆಪರ್ಚುನಿಟಿ ಹಾಗೂ ಮಾಹಿತಿಗಳು ಏನಿದೆ ಅದರ ಮುಂದೆ ಈ ಹಣ ಯಾವುದು ಅಲ್ಲ.
ಯಾಕೆಂದರೆ ಇದರ ಅನುಭವ ನನಗೂ ಕೂಡ ಆಗಿದೆ. ಮೊದಲನೇ ಬಾರಿ ನನಗೂ ಹಣ ಜಾಸ್ತಿ ಎಂದು ಅನಿಸಿತ್ತು ಆದರೆ ಅಲ್ಲಿ ಕಲಿತ ವಿಷಯಗಳು ಬಹಳಷ್ಟು ಇದೆ.
ಮೊದಲನೇ ಬಾರಿ ಅಟೆಂಡ್ ಮಾಡುವ ವಿದ್ಯಾರ್ಥಿಗಳಿಗೆ ಟಿಪ್ಸ್
Conference ಅಟೆಂಡ್ ಮಾಡುವ ಮೊದಲು ವಿದ್ಯಾರ್ಥಿಗಳು ಒಂದು ನೋಟ್ ಬುಕ್ ಹಾಗೂ ಪೆನ್ ನಿಮ್ಮ ಜೊತೆ ತೆಗೆದುಕೊಂಡು ಹೋಗಿ ಅಲ್ಲಿ ನಡೆಯುವ Discussions ಬಗ್ಗೆ ಒಂದು ಸಂಪೂರ್ಣ ನೋಟ್ಸ್ ಮಾಡಿಕೊಳ್ಳಿ ಹಾಗೂ ನಿಮ್ಮದೇ ಆದ ಒಂದು ಕ್ವೆಶ್ಚನ್ ತಯಾರಿಸಿಕೊಳ್ಳಿ ಇದರಿಂದ ನಿಮಗೆ ಬಹಳ ಉಪಯೋಗವಾಗುತ್ತದೆ.
ನಿಮಗೆ ಏನಾದರೂ ಡೌಟ್ ಇದ್ದರೆ ಅಲ್ಲಿ ನೀವು ಪ್ರಶ್ನೆಗಳನ್ನು ಕೇಳಬಹುದು ಹಾಗೂ ಸೆಕ್ಯೂರಿಟಿ ಇಂಜಿನಿಯರ್ಸ್ ಗಳಿಂದ ನೀವು ಉತ್ತರಗಳನ್ನು ಪಡೆದುಕೊಳ್ಳಬಹುದು.
ಅಲ್ಲಿ ಬರುವ ಎಲ್ಲಾ ವ್ಯಕ್ತಿಗಳ ಜೊತೆ ನೀವು ಕನೆಕ್ಟ್ ಆಗಿ. ಸುಮ್ಮನೆ ಹೋಗಿ ಅಟೆಂಡ್ ಮಾಡಿ ಬರಬೇಡಿ.
ಈ ಕಾನ್ಫರೆನ್ಸ್ ವಿದ್ಯಾರ್ಥಿಗಳಿಗೆ ಯಾಕೆ ಮುಖ್ಯ?
ಈ ಪ್ರಶ್ನೆ ಮೊದಲನೇ ಬಾರಿ ನನಗೂ ಕೂಡ ಬಂದಿತ್ತು.
ಇದಕ್ಕೆಲ್ಲ ಉತ್ತರ ಈ ಕಾನ್ಫರೆನ್ಸಿನಲ್ಲಿ ನನಗೆ ಸಿಕ್ಕಿತ್ತು.
ನನ್ನ ಸೆಕ್ಯೂರಿಟಿ ಜರ್ನಿ ಕೂಡ ಈ ಒಂದು ಸಂಸ್ಥೆಯಿಂದಲೇ ಪ್ರಾರಂಭವಾದದ್ದು ಆದ್ದರಿಂದ ನೀವು ಈ ಆಪರ್ಚುನಿಟಿ ಏನಿದೆ ಈ ವರ್ಷ ಅದನ್ನು ಮಿಸ್ ಮಾಡಿಕೊಳ್ಳಬೇಡಿ.
ಈ ಒಂದು ಅವಕಾಶ ನಿಮ್ಮ ಮುಂದಿನ ಭವಿಷ್ಯವನ್ನು ರೂಪಿಸಿಕೊಳ್ಳಲು ಒಂದು ಅತ್ಯುತ್ತಮವಾದ ಮಾರ್ಗವಾಗಿದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ.
ಈ ವರ್ಷ ತಪ್ಪದೇ ಕಾನ್ಫರೆನ್ಸ್ ಅಟೆಂಡ್ ಮಾಡಿ. ನಂತರ ನಿಮ್ಮ Experience ಹೇಗಿತ್ತು ಏನೆಲ್ಲಾ ವಿಷಯಗಳನ್ನು ನೀವು ಸಂಗ್ರಹಣೆ ಮಾಡಿಕೊಂಡಿದ್ದೀರಾ ಎಂಬುದನ್ನು ನಮಗೆ ನೀವು ತಿಳಿಸಬಹುದು.