BSides Bangalore B5CTF 2026 — ₹15,000 ಕ್ಯಾಶ್ ಪ್ರೈಸ್! Students ಬೇಗ ರಿಜಿಸ್ಟರ್ ಮಾಡಿ

Bsides Bangalore ಈ ವರ್ಷ 2026 ಮತ್ತೊಮ್ಮೆ B5CTF (Bsides Bangalore Binary Blitz Battle CTF) ಕಾಂಪಿಟೇಶನ್ ನಡೆಸುತ್ತಿದ್ದಾರೆ. ಇದರಲ್ಲಿ ರಾಜ್ಯದ ಎಲ್ಲಾ ಸ್ಟೂಡೆಂಟ್ಸ್ ಗಳು ಭಾಗಿಯಾಗಬಹುದು.

ನೀವು Computer related degree ಸ್ಟೂಡೆಂಟ್ಸ್ ಆಗಿದ್ದರೆ ಇದು ನಿಮಗೆ ಒಳ್ಳೆಯ ಅವಕಾಶ ಯಾಕೆಂದರೆ ನಿಮ್ಮ ಸ್ಕಿಲ್ಸ್ ಗಳನ್ನು ನೀವು ಇಲ್ಲಿ ತೋರಿಸಬಹುದು. ಈ ಆಪರ್ಚುನಿಟಿ ಅನ್ನು ಮಿಸ್ ಮಾಡಿಕೊಳ್ಳಬೇಡಿ ಏಕೆಂದರೆ ಇದು ನಿಮ್ಮ ಮುಂದಿನ careerಗೆ ಒಂದು ಬಿಗ್ ಚೇಂಜ್ ಕೊಡುವ ಸಾಧ್ಯತೆ ಇದೆ.

B5CTF ಅಂದರೆ ಏನು?

ಈಗಾಗಲೇ ನಾನು bsides ಬೆಂಗಳೂರು ಸಂಸ್ಥೆ ಬಗ್ಗೆ ಲೇಖನವನ್ನು ಬರೆದಿದ್ದೇನೆ. ಅದನ್ನು ನೀವು ಓದಬಹುದು ಇದರಿಂದ ನಿಮಗೆ bsides ಸಂಸ್ಥೆ ಅಂದರೆ ಏನು ಎಂದು ತಿಳಿಯುತ್ತದೆ.

ಈ B5CTF ಕಾಂಪಿಟೇಶನ್ ಬಗ್ಗೆ ನೋಡುವುದಾದರೆ ಇದು ನಿಮ್ಮ ಸೈಬರ್ ಸೆಕ್ಯೂರಿಟಿ, computer skills ಹೇಗಿದೆ ಎಂದು ಪರಿಶೀಲನೆ ಮಾಡುತ್ತದೆ.

ವಿದ್ಯಾರ್ಥಿಗಳು ಯಾವ ರೀತಿ ಯೋಚನೆ ಮಾಡುತ್ತಾರೆ ಹಾಗೂ ಅವರ ಯೋಜನೆಗಳನ್ನು ಯಾವ ರೀತಿ ಟೆಕ್ನಾಲಜಿಯಲ್ಲಿ ಬಳಸುತ್ತಾರೆ ಎಂಬುದೇ ಈ CTF ಕಾಂಪಿಟೇಶನ್ ನ ಮುಖ್ಯ ಉದ್ದೇಶ.

CTF ಅಂದರೆ ಏನು?

ಇದರ ಬಗ್ಗೆ ಒಂದು Detail ಲೇಖನ ಬರೆಯುವುದಾಗಿ ನನ್ನ ಯೋಚನೆ ಇದೆ. ಆದರೆ ಈಗ ಸದ್ಯಕ್ಕೆ CTF ಕಾಂಪಿಟೇಶನ್ ಎಂದರೆ ಏನು ಎಂದು ಒಂದು ಸಣ್ಣ ಇಂಫಾರ್ಮೇಷನ್ ಕೊಡುತ್ತೇನೆ.

CTF ಅಂದರೆ Capture the flag ನಿಮಗೆ ಇಲ್ಲಿ ವಿವಿಧ ರೀತಿಯ computer technology related ಚಾಲೆಂಜ್ ನೀಡಲಾಗುತ್ತದೆ. ಇಲ್ಲಿ ನೀಡಿರುವ ಎಲ್ಲಾ ರೀತಿಯ ಟೆಕ್ನಾಲಜಿಗಳ ಮೇಲೆ ನಿಮಗೆ ಚಾಲೆಂಜ್ ಇರುತ್ತದೆ.

  • Miscellaneous
  • Reverse Engineering
  • Web Exploitation / Web Security
  • Binary Exploitation
  • Digital Forensics
  • OSINT / Reconnaissance
  • Network Security
  • Cyber Range
  • Cryptography

ನೀವು Computer related degree ಸ್ಟೂಡೆಂಟ್ಸ್ ಆಗಿದ್ದರೆ ನಿಮಗೆ ಇದರ ಬಗ್ಗೆ Knowledge ಇರುತ್ತದೆ.

B5CTF ಕಾಂಪಿಟೇಶನ್ Logic ಏನು?

ಕಂಪ್ಯೂಟರ್ ಅಪ್ಲಿಕೇಶನ್, Network file ಒಳಗೆ ಒಂದು Flag ಇಟ್ಟಿರುತ್ತಾರೆ. ಅದನ್ನು ನೀವು ಕಂಡುಹಿಡಿಯಬೇಕು ಇದೇ ಈ B5CTF ಕಾಂಪಿಟೇಶನ್ ಗೇಮ್ logic ಆಗಿರುತ್ತದೆ.

ಕಳೆದ ವರ್ಷದ Flag format ನೋಡುವುದಕ್ಕೆ B5CTF{Pa&&W0RD-I3-3ImPLE} ಈ ರೀತಿ ಇತ್ತು.

ಈ ವರ್ಷದ Flag format ಕೂಡ ಇದೇ ರೀತಿ ಇರಬಹುದು.

ಯಾಕೆ ಕರ್ನಾಟಕ ಸ್ಟೂಡೆಂಟ್ ಪಾರ್ಟಿಸಿಪೇಟ್ ಮಾಡಬೇಕು

ಕಳೆದ ವರ್ಷ ನಾವು ಕೂಡ ಈ ಕಾಂಪಿಟೇಶನ್ ನಲ್ಲಿ ಭಾಗಿಯಾಗಿದ್ವಿ, ಅದರ ಸಂಪೂರ್ಣ ಡೀಟೇಲ್ಸ್ ನೋಡಬಹುದು ಇದರಲ್ಲಿ ನಾವು 4225 ಪಾಯಿಂಟ್ಸ್ ಗಳನ್ನು ಗಳಿಸಿ 8ನೇ ಸ್ಥಾನ ಪಡೆದುಕೊಂಡಿದ್ವಿ.

Last Year Bsides CTF 2025
B5CTF 2025 ನಮ್ಮ ಟೀಮ್ 8ನೇ ಸ್ಥಾನ

ಈ ವರ್ಷ ಕೂಡ ನಾವು B5CTF 2026 ಪಾರ್ಟಿಸಿಪೇಟ್ ಮಾಡುತಿದ್ದೇವೆ.

  • ಈ ಕಾಂಪಿಟೇಶನ್ ಆಡುವುದರಿಂದ ನಿಮ್ಮ ಪ್ರಾಕ್ಟಿಕಲ್ Knowledge ಇಂಪ್ರೂವ್ ಆಗುತ್ತೆ. 
  • ನಿಮ್ಮ resume ಬಿಲ್ಡ್ ಮಾಡುವುದಕ್ಕೂ ಕೂಡ ಹೆಲ್ಪ್ ಆಗುತ್ತದೆ. 
  • ನಿಮ್ಮ ಸೋಶಿಯಲ್ ನೆಟ್ವರ್ಕ್ ಜಾಸ್ತಿಯಾಗುತ್ತದೆ.
  • ರಿಯಲ್ ವರ್ಲ್ಡ್ ಸೆಕ್ಯೂರಿಟಿ ಚಾಲೆಂಜರ್ಸ್ ಅರ್ಥ ಆಗುತ್ತೆ.

B5CTF ಯಾರು ಪಾರ್ಟಿಸಿಪೇಟ್ ಮಾಡಬಹುದು?

ಈ ಕಾಂಪಿಟೇಶನ್ ಅನ್ನು ಎರಡು ವಿವಿಧ ರೀತಿಯಲ್ಲಿ ನಡೆಸುತ್ತಿದ್ದಾರೆ.

  • Corporate CTF
  • Student CTF

ಕಾರ್ಪೊರೇಟ್ CTF ಆಡುವ ಅವಶ್ಯಕತೆ ಇರುವುದಿಲ್ಲ ಯಾಕೆಂದರೆ ಇದು ಬರಿ ಕಂಪನಿಗಳ ಎಂಪ್ಲಾಯ್ ಗಳಿಗೆ ಮಾತ್ರ. ಈಗ ನೀವು ಸ್ಟೂಡೆಂಟ್ CTF ಮಾತ್ರ ಆಡುತ್ತೀರಾ. 

ಕಂಪ್ಯೂಟರ್ ಡಿಗ್ರಿ ರಿಲೇಟೆಡ್ ಸ್ಟೂಡೆಂಟ್ಸ್ ಯಾರಾದರೂ ಕೂಡ ಈ ಕಾಂಪಿಟೇಶನ್ ಪಾರ್ಟಿಸಿಪೇಟ್ ಮಾಡಬಹುದು. ಯಾವುದೇ ರೀತಿಯ restrictions ಇರುವುದಿಲ್ಲ.

Competition ಆಡುವುದಕ್ಕೆ ಯಾವ ಸ್ಕಿಲ್ಸ್ ಗಳು ಬೇಕು

ನೀವು ಯಾವ CTF ಚಾಲೆಂಜ್ ಸೆಲೆಕ್ಟ್ ಮಾಡುತ್ತೀರಾ ಅದರ ಮೇಲೆ ಸ್ಕಿಲ್ಸ್ ಡಿಪೆಂಡ್ ಆಗುತ್ತದೆ. 

ಒಂದು ವೇಳೆ ನೀವೇನಾದರೂ Web security ಚಾಲೆಂಜ್ ಆಡಲು ಬಯಸಿದರೆ ನಿಮಗೆ Web application knowledge ಇರಬೇಕು. ಇದರಲ್ಲಿ ನಿಮಗೆ HTTP, OWASP Top 10, DNS Knowledge ಇರಬೇಕು.

ಇದೇ ರೀತಿ ಒಂದೊಂದು ಕ್ಯಾಟಗರಿಗಳಿಗೆ ಸಪರೇಟ್ Knowledge ಇರಬೇಕು.

ನೀವು ಕಂಪ್ಯೂಟರ್ ಸ್ಟೂಡೆಂಟ್ಸ್ ಆದ್ದರಿಂದ ನಿಮಗೆ ಇದರ ಬಗ್ಗೆ ಈಗಾಗಲೇ ತಿಳಿದಿರುತ್ತದೆ. 

B5CTF Competition ಟೀಮ್ Overview

  • ನಿಮ್ಮದೇ ಆದ ಒಂದು ಟೀಮ್ ರೆಡಿ ಮಾಡಿಕೊಂಡು ಕೂಡ ನೀವು ಈ CTF ಆಡಬಹುದು. 
  • ಇಲ್ಲವಾದರೆ ನೀವು ಇಂಡಿವಿಜುಯಲ್ (Solo) ಆಗಿ ಕೂಡ ಆಡಬಹುದು. 

ಒಂದು ಟೀಮಿನಲ್ಲಿ ಇಬ್ಬರಿಗೆ ಮಾತ್ರ ಅವಕಾಶ ಮಾಡಿಕೊಳ್ಳಲಾಗುತ್ತದೆ.

ಜಾಸ್ತಿ Members ಅವಕಾಶ ಇರುವುದಿಲ್ಲ.

CTF ಕಾಂಪಿಟೇಶನ್ ರಿಜಿಸ್ಟ್ರೇಷನ್ ಡೀಟೇಲ್ಸ್

Event Details
Student CTF Start June 20, 2026 – 11:00 IST
Student CTF End June 21, 2026 – 11:00 IST
Registration Register Here
Official Portal bsidesbangalore

* All timings are in Indian Standard Time (IST)

ರಿಜಿಸ್ಟ್ರೇಷನ್ ಲಿಂಕ್ ಕ್ಲಿಕ್ ಮಾಡಿ metactf portal ಲಾಗಿನ್ ಆಗಬೇಕು. ನಂತರ ನೀವು ಜಾಯಿನ್ ಆಗಬಹುದು ರಿಜಿಸ್ಟ್ರೇಷನ್ ಪ್ರೋಸೆಸ್ ಬಹಳ ಸುಲಭವಾಗಿರುತ್ತದೆ. 

B5CTF, 24 ಗಂಟೆ ಅಂದರೆ ಒಂದು ದಿನ ನಡೆಯುತ್ತದೆ.

B5CTF 2026 ಕಾಂಪಿಟೇಶನ್ ಅವಾರ್ಡ್ಸ್

ಸ್ಥಾನ Awards & Recognition
First Place ₹15,000 INR cash prize  ·  Trophy  ·  Winner Certificate ನೀಡಲಾಗುತ್ತದೆ.

MetaCTF On-Demand Labs Platform access (6 Months)
Second Place ₹10,000 INR cash prize  ·  Trophy  ·  Winner Certificate ನೀಡಲಾಗುತ್ತದೆ.

MetaCTF On-Demand Labs Platform access (6 Months)
Third Place ₹5,000 INR cash prize  ·  Trophy  ·  Winner Certificate ನೀಡಲಾಗುತ್ತದೆ.

MetaCTF On-Demand Labs Platform access (6 Months)

ಎಲ್ಲಾ ವಿದ್ಯಾರ್ಥಿಗಳಿಗೂ ಸರ್ಟಿಫಿಕೇಟ್ ನೀಡಲಾಗುತ್ತದೆ. ಇದು ನಿಮಗೆ Resume ಬಿಲ್ಡ್ ಮಾಡಬೇಕಿದ್ದರೆ ಹಾಗೂ ಇಂಟರ್ವ್ಯೂ ಸಂದರ್ಭದಲ್ಲಿ ಉಪಯೋಗಕ್ಕೆ ಬರುತ್ತದೆ.

Bsides Bangalore CTF ಕಾಂಪಿಟೇಶನ್ ರೂಲ್ಸ್

Bsides Bangalore CTF ಕಾಂಪಿಟೇಶನ್ ರೂಲ್ಸ್
B5CTF 2026 ರೂಲ್ಸ್


Corporate CTF ರೂಲ್ಸ್ ನಿಮಗೆ ಅಪ್ಲೈ ಆಗುವುದಿಲ್ಲ.

ಸ್ಟುಡೆಂಟ್ CTF ರೂಲ್ಸ್ ಏನಿದೆ ಅದು ನಿಮಗೆ ಅಪ್ಲೈ ಆಗುತ್ತದೆ ಅದನ್ನು ನೀವು ಒಮ್ಮೆ ಓದಿಕೊಳ್ಳಿ.

Students ಸಮಯ ವ್ಯರ್ಥ ಮಾಡಬೇಡಿ ಬೇಗ ರಿಜಿಸ್ಟ್ರೇಷನ್ ಆಗಿ ಇಲ್ಲವಾದರೆ ಈ ಒಂದು Big career changing ಆಪರ್ಚುನಿಟಿ ನೀವು ಕಳೆದುಕೊಳ್ಳಬೇಕಾಗುತ್ತದೆ.

Frequently Asked Question

BSides Bangalore B5CTF ಎಂಟ್ರಿ ಲೆವೆಲ್ ಸ್ಟೂಡೆಂಟ್ಸ್ ಗೆ ಉಪಯೋಗವಾಗುತ್ತಾ?

ಹೌದು ನೀವೇನಾದರೂ ಮೊದಲನೇ ವರ್ಷದ ಕಂಪ್ಯೂಟರ್ ಡಿಗ್ರಿ ಮಾಡುತ್ತಿದ್ದಾರೆ ನಿಮಗೆ ಇದು ಗೋಲ್ಡನ್ ಆಪರ್ಚುನಿಟಿ ಯಾಕಂದರೆ ನಿಮ್ಮ ಸ್ಕಿಲ್ ಡೆವಲಪ್ಮೆಂಟ್ ಆಗುತ್ತದೆ.

ಈ ಕಾಂಪಿಟೇಶನ್ ಆಡುವುದಕ್ಕೆ Programming ನಾಲೆಜ್ ಇರಬೇಕಾ?

ಕೆಲವೊಂದು ಕೆಟಗರಿಗೆ ಮಾತ್ರ Programming ನಾಲೆಜ್ ಬೇಕು ಇಲ್ಲವಾದರೆ ನೀವು ಪ್ರೋಗ್ರಾಮ್ Knowledge ಇಲ್ಲದಿದ್ದರೂ ಈ ಕಾಂಪಿಟೇಶನ್ ಮಾಡಬಹುದು.

ಕಾಂಪಿಟೇಶನ್ ಆಡುವುದಕ್ಕೆ ಪ್ರಿಪೇರ್ ಹೇಗೆ ಆಗಬೇಕು?

TryHackMe ಎಂದು ಒಂದು ಪ್ಲಾಟ್ಫಾರ್ಮ್ ಇದೆ. ಅದರಲ್ಲಿ ನೀವು ಪ್ರಾಕ್ಟೀಸ್ ಮಾಡಬಹುದು ಇದರಿಂದ ನಿಮಗೆ ಕಾಂಪಿಟೇಶನ್ ಸಂದರ್ಭದಲ್ಲಿ ಉಪಯೋಗವಾಗುತ್ತದೆ.

Author

  • Sachin E Author and owner of Code Kannada

    Hi ನಾನು ಸಚಿನ್ E Web Developer and Security Tester from Karnataka, currently working @bandwings. I regularly attends cybersecurity conferences and writes everything I learn — in Kannada, for free.

Knowledge becomes more valuable when it is shared

CodeKannada ಜೊತೆ Connect ಆಗಿ

ಹೆಚ್ಚಿನ articles, updates ಮತ್ತು Career tips ಗಾಗಿ join ಆಗಿ