Cyber Security ಫೀಲ್ಡ್ ಗೆ ನೀವು ಎಂಟ್ರಿ ಆಗ್ಬೇಕಂದ್ರೆ ನಿಮ್ಮ ಬಳಿ ಯಾವೆಲ್ಲಾ ಸ್ಕಿಲ್ಸ್ ಗಳು ಇರಬೇಕು? ಈ ಒಂದು ಪ್ರಶ್ನೆ ಎಲ್ಲಾ ವಿದ್ಯಾರ್ಥಿಗಳಿಗೂ ಕಾಡುತ್ತಲೇ ಇರುತ್ತದೆ.
Networking ಕಲಿಬೇಕಾ? Linux Fundamentals ಕಲಿಬೇಕಾ? ಅಥವಾ ಪ್ರಾಜೆಕ್ಟ್ ಗಳು ಮಾಡಬೇಕಾ? ಯಾವ ವಿಷಯಗಳನ್ನು ಕಲಿತರೆ ನಾವು ಸೈಬರ್ ಸೆಕ್ಯೂರಿಟಿ ಜಾಬ್ ಫೀಲ್ಡಿಗೆ ಎಂಟ್ರಿ ಆಗಬಹುದು?
ನಿಮ್ಮ ಎಲ್ಲಾ ಪ್ರಶ್ನೆಗಳಿಗೂ ಇಲ್ಲಿ ಉತ್ತರ ಸಿಗಲಿದೆ.
ಯಾಕೆ Cyber Security ಫೀಲ್ಡ್ Grow ಆಗ್ತಾ ಇದೆ?
ಇತ್ತೀಚಿಗೆ ಆಗುತ್ತಿರುವ ಸೈಬರ್ Attacks ಹಾಗೂ ಅದರಿಂದ ಬರುತ್ತಿರುವ ರಿಪೋರ್ಟ್ ಗಳು ಮತ್ತು ಅದರ ಪರಿಣಾಮಗಳು ಮನುಷ್ಯನ ಬದುಕಿನ ಮೇಲೆ ಹಾಗೂ ಆರ್ಥಿಕ ಜಗತ್ತಿನ ಮೇಲೆ ಬಹಳಷ್ಟು ಪರಿಣಾಮ ಬೀರುತಿದೆ.
Cyber ಕ್ರಿಮಿನಲ್ಸ್ ಏನಿದ್ದಾರೆ ಇವರು ಪ್ರತಿನಿತ್ಯ ಲಕ್ಷಾಂತರ ಜನರ Personal ಡೇಟಾ ಕದಿತಾನೆ ಇರುತ್ತಾರೆ.
ಕೆಲವೊಂದು ಸಾರಿ ಗೌರ್ಮೆಂಟ್ ಹಾಗೂ ಹೆಲ್ತ್ ರಿಲೇಟೆಡ್ ಫೀಲ್ಡ್ ಗಳಲ್ಲಿಯೂ ಸಹ ಸೈಬರ್ ವಂಚಕರು ಡೇಟಾ ಕದಿಯುತ್ತಾರೆ. ಇದರಿಂದ ಸಾಮಾನ್ಯ ಜನರ ಮೇಲೆ ಬಹಳಷ್ಟು ಪರಿಣಾಮ ಬೀಳುತ್ತದೆ
Cyber Attacks ದಿನದಿಂದ ದಿನಕ್ಕೆ ಜಾಸ್ತಿ ಆಗುತ್ತಲೇ ಇದೆ. ಆದ್ದರಿಂದ ಸೈಬರ್ ಸೆಕ್ಯೂರಿಟಿ ಎನ್ನುವ ಒಂದು ಫೀಲ್ಡ್ ಈ ಪ್ರಪಂಚಕ್ಕೆ ಹಾಗೂ ಸಾಮಾನ್ಯ ಜನರ ಜೀವನಕ್ಕೆ ಬಹಳ ಮುಖ್ಯ.
ದೇಶದ ಪ್ರತಿ ಕಂಪನಿಗಳು ತಮ್ಮ ಬಿಸಿನೆಸ್ ಡೇಟಾಗಳನ್ನು ಸುರಕ್ಷಿತ ಮಾಡಲು ಓಡಾಡುತ್ತಲೇ ಇರುತ್ತದೆ.
ಇದರಿಂದ ಸೈಬರ್ ಸೆಕ್ಯೂರಿಟಿ ಇಂಡಸ್ಟ್ರಿಗೆ ಬಹಳಷ್ಟು ಬೇಡಿಕೆ ಬಂದಿದೆ.
ನಿಮ್ಮ ಬಳಿ ಸರಿಯಾದ Skills ಇದ್ದರೆ. ನೀವು ಕೂಡ ಸೈಬರ್ Security ಇಂಡಸ್ಟ್ರಿಗೆ ಎಂಟ್ರಿ ಕೊಡಬಹುದು.
ಇತ್ತೀಚಿನ March ಸೈಬರ್ ಸೆಕ್ಯೂರಿಟಿ ರಿಪೋರ್ಟ್ ಏನು ಹೇಳುತ್ತದೆ ಎಂದರೆ ದೇಶದಲ್ಲಿ 12 ಲಕ್ಷ ಸೈಬರ್ ಸೆಕ್ಯೂರಿಟಿ ಜಾಬ್ ಓಪನಿಂಗ್ ಗಳು ಇದ್ದಾವೆ. ಆದರೆ ಯಾಕೆ ಸರಿಯಾಗಿ ಈ ಓಪನಿಂಗ್ ಗಳು ಬರ್ತೀಯಾಗುತ್ತಿಲ್ಲ?
ಇದಕ್ಕೆ ಮುಖ್ಯ ಕಾರಣ Skill gap.
Cyberattack ಅಂದರೆ ಏನು?
Cyberattack ಅಂದರೆ ಒಂದೇ ಮಾತಿನಲ್ಲಿ ಹೇಳಬೇಕೆಂದರೆ: ಬೇರೆಯವರ ಕಂಪ್ಯೂಟರ್ ನೆಟ್ವರ್ಕ್ಗಳಿಗೆ ಇಲ್ಲಿಗಲ್ ಆಕ್ಸೆಸ್ ಮಾಡಿ ಅವರ ಡೇಟಾ ನಾಶ ಮಾಡುವುದೇ ಸೈಬರ್ ಅಟ್ಯಾಕ್.
ಈಗಿನ ಕಾಲದಲ್ಲಿ ಸೈಬರ್ ಅಟ್ಯಾಕ್ ಕಂಪ್ಯೂಟರ್ಗಳಲ್ಲಿ ಮಾತ್ರ ಆಗಬೇಕಂತಿಲ್ಲ.
- ನಿಮ್ಮ ಮೊಬೈಲ್ ಫೋನ್ ಆಗಿರಬಹುದು.
- ನಿಮ್ಮ ಸ್ಮಾರ್ಟ್ ವಾಚ್ ಆಗಿರಬಹುದು.
- ನಿಮ್ಮ ಸ್ಮಾರ್ಟ್ Fridge ಆಗಿರಬಹುದು.
- ನಿಮ್ಮ ಸ್ಮಾರ್ಟ್ Home appliances ಆಗಿರಬಹುದು.
ಎಲ್ಲಾ IOT (Internet of things) ವಸ್ತುಗಳು ಕೂಡ ಸೈಬರ್ ಅಟ್ಯಾಕ್ ಗಳ ಟಾರ್ಗೆಟ್ ಆಗಬಹುದು ಎಚ್ಚರ.
ಯಾಕೆ ಸೈಬರ್ ಸೆಕ್ಯೂರಿಟಿ ಒಳ್ಳೆಯ Career ಆಪ್ಷನ್?
ಪ್ರತಿಯೊಂದು ಸಂಸ್ಥೆಗೆ ಹಾಗೂ ಟೆಕ್ನಾಲಜಿಗೆ ಸೈಬರ್ ಸೆಕ್ಯೂರಿಟಿ ಅವಶ್ಯಕತೆ ಇದೆ. ಎಲ್ಲಿ ಇಂಟರ್ನೆಟ್ ಇದೆ ಅಲ್ಲಿ ಸೈಬರ್ ಸೆಕ್ಯೂರಿಟಿ ಬೇಕೇ ಬೇಕು.
ಸೆಕ್ಯೂರಿಟಿ ಇಲ್ಲದೆ ಯಾವುದೇ ಸಂಸ್ಥೆ ಅವರ ಬಿಜಿನೆಸ್ ನಡೆಸುವುದಕ್ಕೆ ಅದು ಈಗಿನ ಕಾಲದಲ್ಲಿ ಸಾಧ್ಯವೇ ಇಲ್ಲ.
ಆದ್ದರಿಂದ 2026 ರಲ್ಲಿ ಈ ಫೀಲ್ಡ್ ಆಯ್ಕೆ ಮಾಡುವುದು ನಿಮಗೆ ಬಹಳ ಒಳ್ಳೆಯ ಆಪ್ಷನ್ ಆಗಿದೆ. ಪ್ರತಿ ಕಂಪನಿಗೆ SOC (Security operations centre) ಅಂತ ಒಂದು ಸೆಕ್ಯೂರಿಟಿ ಇಂಜಿನಿಯರ್ಸ್ Team ಬೇಕು.
ನೀವು ಈ Cyber Security ಫೀಲ್ಡ್ ಗೆ ಎಂಟ್ರಿ ಆಗಬೇಕೆಂದರೆ SOC ಅನಲಿಸ್ಟ್ ಆಗಿ ಎಂಟ್ರಿ ಕೊಡಬೇಕು. ಇದು ನಿಮ್ಮ ಸೈಬರ್ ಸೆಕ್ಯೂರಿಟಿ ಫೀಲ್ಡ್ ಗೆ ಒಂದು ಒಳ್ಳೆಯ ಫೌಂಡೇಶನ್ ಕೊಡುತ್ತದೆ.
Cyber ಸೆಕ್ಯೂರಿಟಿ ಗೆ ಬರಲು ಈ ಸ್ಕಿಲ್ಸ್ ಗಳು ಬೇಕು
1. ನೆಟ್ವರ್ಕಿಂಗ್ ಕಲಿಬೇಕು:
ಡೇಟಾ ಯಾವ ರೀತಿ ಒಂದು ಮೊಬೈಲ್ ನಿಂದ ಇನ್ನೊಂದು ಮೊಬೈಲ್ ಗೆ ಹೋಗುತ್ತೆ. ಹೋಗುವ ಮುನ್ನ ಯಾವೆಲ್ಲ ಪ್ರೋಸೆಸ್ ಅಂದರೆ ಲೇಯರ್ ಗಳನ್ನು ದಾಟಿ ಅವರ ಫೋನಿಗೆ ಹೋಗುತ್ತದೆ ಇದನ್ನು ನೀವು ಮೊದಲು ತಿಳಿಯಬೇಕು.
2. Linux Fundamentals ಕಲಿಬೇಕು:
ಇದು ಒಂತರ ಸೆಕ್ಯೂರಿಟಿ ಇಂಜಿನಿಯರ್ಸ್ ಎನಿದ್ದಾರೆ ಅವರ ಒಂದು ಫೇವರೆಟ್ ಆಪರೇಟಿಂಗ್ ಸಿಸ್ಟಮ್ ಇಲ್ಲಿ ಎಲ್ಲಾ ರೀತಿಯ Security hacking ಟೂಲ್ಸ್ಗಳು ನಿಮಗೆ ಸಿಗುತ್ತದೆ.
3. ಬೇಸಿಕ್ ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್ ಐಡಿಯಾ ಇರಬೇಕು:
- C
- Python
- Javascript
- Bash
4. Security Labs:
ಬರೀ ಥಿಯರಿ ಓದಿದರೆ ಸೈಬರ್ ಸೆಕ್ಯೂರಿಟಿ ನಿಮಗೆ ಒಲಿಯುವುದಿಲ್ಲ.
ಸೈಬರ್ ಸೆಕ್ಯೂರಿಟಿ ಅಂದರೆ Hands on Training.
ನಾನು ಯಾವ ಪ್ಲಾಟ್ಫಾರ್ಮ್ ಯೂಸ್ ಮಾಡಿ ಕಲಿಯುತ್ತಿದ್ದೆ ಎಂದರೆ:
Try Hack Me – ಈ ಒಂದು ವೆಬ್ಸೈಟ್ನಲ್ಲಿ ನಿಮಗೆ ಎಲ್ಲಾ ರೀತಿಯ ಸೈಬರ್ ಸೆಕ್ಯೂರಿಟಿ ಇನ್ಫಾರ್ಮಶನ್ ಗಳು ಸಿಗುತ್ತದೆ ಹಾಗೂ ನಿಮಗೆ ಪ್ರಾಕ್ಟೀಸ್ ಮಾಡುವುದಕ್ಕೆ Vulnerable ಮಷೀನ್‌ಗಳು ಕೂಡ ಸಿಗುತ್ತವೆ. ನೀವು ಇದರಲ್ಲಿ ಪ್ರಾಕ್ಟೀಸ್ ಮಾಡಿ ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬಹುದು.
Port Swigger – ನೀವು Web ಅಪ್ಲಿಕೇಶನ್ ಸೆಕ್ಯೂರಿಟಿ ಕಲಿಬೇಕೆಂದರೆ ಈ ಒಂದು ಪ್ಲಾಟ್ಫಾರ್ಮ್ ನಿಮಗೆ ಬಹಳಷ್ಟು ಉಪಯೋಗವಾಗುತ್ತದೆ. ಇದರಲ್ಲಿ ನೀವು ವೆಬ್ಸೈಟ್ ಸರ್ವರ್ ಜೊತೆ ಯಾವ ರೀತಿ ಮಾತಾಡುತ್ತದೆ ಎಂಬ ವಿಷಯಗಳನ್ನು ಕೂಡ ಕಲಿಯಬಹುದು.
ಯಾವ ರೀತಿ ವಿದ್ಯಾರ್ಥಿಗಳು Experience ಪಡೆದುಕೊಳಬಹುದು
ಪ್ರತಿ ವಾರ ಒಂದು CTF ಕಾಂಪಿಟೇಶನ್ ಆಡಬೇಕು CTF ಕಾಂಪಿಟೇಶನ್ ಅಂದರೆ “Capture The Flag” Vulnerable ಕಂಪ್ಯೂಟರ್ ಮಷೀನ್ ಏನಿರುತ್ತೆ ಅದನ್ನು ನೀವು ಹ್ಯಾಕ್ (Hack) ಮಾಡಬೇಕು ಯಾವ ರೀತಿ ನೀವು ಹ್ಯಾಕ್ ಮಾಡುತ್ತೀರಾ? ಹಾಗೂ ಹ್ಯಾಕ್ ಮಾಡಿದ ನಂತರ ನಿಮಗೆ ಒಂದು Flag ಸಿಗುತ್ತದೆ.
Flag ನೋಡುವುದಕ್ಕೆ ಈ ರೀತಿ ಇರುತ್ತದೆ – shaktictf{Th15_1s_r3v3ng3}
ಇದರಿಂದ ನಿಮ್ಮ ಸ್ಕಿಲ್ಸ್ ಡೆವಲಪ್ ಆಗುತ್ತೆ.
ಪ್ರತಿ ವಾರ ಲೋಕಲ್ Security ಮೀಟ್ Up ಇರುತ್ತದೆ. ಅದನ್ನು ಅಟೆಂಡ್ ಮಾಡುತ್ತಲೇ ಇರಬೇಕು.
ಈ ವರ್ಷ Bsides Bangalore ಅನುಯಲ್ ಕಾನ್ಫರೆನ್ಸ್ ಇದೆ. ಇದನ್ನು ಮಿಸ್ ಮಾಡದೆ ಅಟೆಂಡ್ ಮಾಡಿ.
ದೊಡ್ಡ ಕಂಪನಿಗಳ ಸೆಕ್ಯೂರಿಟಿ ಇಂಜಿನಿಯರ್ಸ್ ಗಳು ಬಂದಿರುತ್ತಾರೆ.
ಇದರಿಂದ ನಿಮ್ಮ ಕನ್ನೆಕ್ಷನ್ಸ್ ಜಾಸ್ತಿಯಾಗುತ್ತದೆ.
Beginners ಮಾಡುವ ಸಣ್ಣ ತಪ್ಪುಗಳು ಯಾವುದು?
ಯಾವುದೇ ವಿಷಯಗಳನ್ನು ಕಲಿಯಬೇಕಾದರೆ ಮೊದಲು ಅದರ ಫಂಡಮೆಂಟಲ್ ತಿಳಿದುಕೊಳ್ಳಬೇಕು ಇಲ್ಲವಾದರೆ ನಿಮಗೆ ಈ ಒಂದು ಫೀಲ್ಡ್ ನಲ್ಲಿ ಯಾವುದೇ ರೀತಿಯ ವಿಷಯಗಳು ಅರ್ಥವಾಗುವುದಿಲ್ಲ.
ಅಡಿಪಾಯ ಗಟ್ಟಿ ಇದ್ದರೆ ಎಷ್ಟು ದೊಡ್ಡ ಬಿಲ್ಡಿಂಗ್ ಬೇಕಾದರೂ ಕಟ್ಟಬಹುದು.
Tom Yeh ಇವರು Taiwanese ಮೂಲದವರು ಈಗ ಇವರು ಕಂಪ್ಯೂಟರ್ Science ಪ್ರೊಫೆಸರ್ ಆಗಿ University of Colorado Boulder ರಲ್ಲಿ ಕೆಲಸ ಮಾಡುತ್ತಿದ್ದಾರೆ.
ಇವರು AI ಫೀಲ್ಡಿನಲ್ಲಿ ಬಹಳ ದೊಡ್ಡ ಸಾಧನೆ ಮಾಡಿದ್ದಾರೆ.
ನಾನು ಇವರ ಬಗ್ಗೆ ಯಾಕೆ ಮಾತನಾಡುತ್ತಿದ್ದೇನೆ ಅಂದರೆ, ಯಾವುದೇ ವಿಷಯವನ್ನು ನಾವು ಕಲಿಯಬೇಕಾದರೆ ನಮಗೆ ಫೌಂಡೇಶನ್ ಎಷ್ಟು ಮುಖ್ಯ ಎಂದು ನಾನು ಕಲಿತಿದ್ದು ಇವರಿಂದಲೇ.
ಇವರು ಏನು ಹೇಳುತ್ತಾರೆ ಎಂದರೆ “Having an answer doesn’t mean you know it “
ಇವರು ಕಲಿಕೆಯನ್ನು ಮನೆ ಕಟ್ಟುವುದಕ್ಕೆ ಉದಾಹರಣೆ ನೀಡುತ್ತಾರೆ:
- AI tools = changing decorations
- Foundations = core skills and understanding
If your foundation is strong, you can adapt to any future technology.
ಯಾವುದೇ ವಿಷಯವನ್ನು ಕಲಿಯಬೇಕಾದರೆ ಬಹಳ ನಿಧಾನವಾಗಿ ಕಲಿಯಬೇಕು. ಆಗ ಮಾತ್ರ ವಿಷಯಗಳು ನಮ್ಮ ಮೆದುಳಿನಲ್ಲಿ ಬಹಳಷ್ಟು ದಿನದ ಕಾಲ ಉಳಿಯುತ್ತದೆ.
ಬರಿ ಸರ್ಟಿಫಿಕೇಟ್ ಮಾಡುವುದರಿಂದ ಯಾವುದೇ ರೀತಿಯ ಉಪಯೋಗವಾಗುವುದಿಲ್ಲ. ಸರ್ಟಿಫಿಕೇಟ್ ಮಾಡುವುದರ ಜೊತೆಗೆ ವಿಷಯಗಳನ್ನು ಕೂಡ ತಿಳಿದುಕೊಳ್ಳಬೇಕು.
ಪ್ರಾಜೆಕ್ಟ್ ಮಾಡುತ್ತಲೇ ಇರಬೇಕು. ಸುಮ್ಮನೆ ಕಲಿತರೆ ಯಾವುದೇ ರೀತಿಯ ಉಪಯೋಗವಾಗುವುದಿಲ್ಲ.

ನೀವು Daily ಏನು ಕಲಿತೀರಾ ಅದರ ಮೇಲೆ ಒಂದು ಸಣ್ಣ ಪ್ರಾಜೆಕ್ಟ್ ಮಾಡಬೇಕು.
ನೀವು ಮಾಡುವ ಪ್ರಾಜೆಕ್ಟ್ ಗಳು GitHub ಅಕೌಂಟಿನಲ್ಲಿ Project Post ಮಾಡಬೇಕು.
ಈ GitHub ಏನಿದೆ ಇದು ಡೆವಲಪರ್ಸ್ಗಳ ಒಂದು ಮನೆಯಾಗಿದೆ.
ಎಂಟ್ರಿ ಲೆವೆಲ್ Cyber Security Jobs
- SOC Analyst
- Security Analyst
- Junior Pentester
- Security Operations
ಈ ಎಲ್ಲಾ ಜಾಬ್ ಗಳಿಗೆ ನೀವು ಎಂಟ್ರಿ ಲೆವೆಲ್ ಫೀಲ್ಡಿನಲ್ಲಿ ಅಪ್ಲೈ ಮಾಡಬಹುದು.
Frequently Asked Questions
Cyber Security ಜಾಬ್ ಸೇರಲು ಯಾವ ಡಿಗ್ರಿ ಅವಶ್ಯಕತೆ ಇದೆ
ಯಾವುದೇ ಡಿಗ್ರಿ ಇದ್ದರೂ ಈ Cyber Security ಫೀಲ್ಡ್ ಗೆ ಎಂಟ್ರಿ ನೀಡಬಹುದು. ಆದರೆ ನಿಮ್ಮ ಬಳಿ ಫೌಂಡೇಶನ್ ಸ್ಕಿಲ್ಸ್ ಇರಬೇಕು.
ಕೋಡಿಂಗ್ Knowledge ಇರಬೇಕಾ?
ಕೋಡಿಂಗ್ Understanding ನಾಲೆಜ್ ಇದ್ದರೆ ಸಾಕು. ಕೋಡಿಂಗ್ ಮಾಡುವ ಅವಶ್ಯಕತೆ ಇರುವುದಿಲ್ಲ.
Cyber Security ಡಿಫಿಕಲ್ಟ್ ಇದಿಯಾ?
ಡಿಫಿಕಲ್ಟ್ ಅನ್ನುವುದು ನಿಮ್ಮ ಮೈಂಡ್ ಸೆಟ್ ಮೇಲೆ ಡಿಪೆಂಡ್ ಆಗುತ್ತದೆ. ನೀವು ಯಾವ ರೀತಿ ಯೋಚನೆ ಮಾಡುತ್ತೀರಾ ಅದರ ಮೇಲೆ ಈ ಫೀಲ್ಡ್ ಡಿಫಿಕಲ್ಟ್ ಅಥವಾ Easy ಆಗುತ್ತದೆ.
Non CS ಬ್ಯಾಗ್ರೌಂಡ್ ಸ್ಟೂಡೆಂಟ್ Cyber Security ಕಲಿಯಬಹುದಾ?
ಖಂಡಿತವಾಗಿ ಎಂಟ್ರಿ ಕೊಡಬಹುದು ಅದಕ್ಕೆ “Anugrah S.R” ಸಾಕ್ಷಿ ಬಯಲಜಿ ಸ್ಟೂಡೆಂಟ್ ಆದ ಇವರು ಈಗ Security analyst at UST ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.