IP Address, ಪೋಸ್ಟ್ ಮ್ಯಾನ್ ಪೋಸ್ಟ್ ತಲುಪಿಸಲು ಹೇಗೆ ನಿಮ್ಮ ಮನೆ ಅಡ್ರೆಸ್ ಬೇಕು, ಅದೇ ರೀತಿ ಕಂಪ್ಯೂಟರ್ ಜಗತ್ತಿನಲ್ಲಿ ಯಾವುದೇ ರೀತಿಯ ಇಂಫಾರ್ಮೇಷನ್ ಶೇರ್ ಆಗಬೇಕೆಂದರೆ ಕಂಪ್ಯೂಟರ್ಗಳಿಗೆ IP ಅಡ್ರೆಸ್ ಇರಬೇಕು ಇಲ್ಲವಾದರೆ Data ಯಾವುದೇ ರೀತಿಯ Device ಗಳಿಗೆ ಶೇರ್ ಆಗುವುದಿಲ್ಲ.
IP Address ಇರುವುದರಿಂದ ಕಂಪ್ಯೂಟರ್ ಡೇಟಾ ಗಳನ್ನು ಸುಲಭವಾಗಿ ಶೇರ್ ಮಾಡುತ್ತದೆ.
ಈಗಾಗಲೇ DNS ಯಾವ ರೀತಿ Domain ನೇಮನ್ನು IP ಅಡ್ರೆಸ್ ಆಗಿ ಹೇಗೆ ಕನ್ವರ್ಟ್ ಮಾಡುತ್ತದೆ ಎಂದು ಲೇಖನವನ್ನು ಬರೆದಿದ್ದೇನೆ ಅದನ್ನು ಒಮ್ಮೆ ಚೆಕ್ ಮಾಡಿ.
ಕಂಪ್ಯೂಟರ್ IP ಅಡ್ರೆಸ್ ನೋಡುವುದಕ್ಕೆ ಈ ರೀತಿ ಇರುತ್ತದೆ – 192.168.1.1
ಯಾಕೆ ಕಂಪ್ಯೂಟರ್ಗಳಿಗೆ IP Address ಬೇಕು
IP address ಇಲ್ಲವಾದರೆ ನಿಮ್ಮ ಡೇಟಗಳನ್ನು ಎಲ್ಲಿ ಕಳುಹಿಸಬೇಕೆಂದು ಕಂಪ್ಯೂಟರ್ಗಳಿಗೆ ಸರಿಯಾಗಿ ಗೊತ್ತಾಗುವುದೇ ಇಲ್ಲ ಇದು ಒಂಥರಾ computer logical ಅಡ್ರೆಸ್.
logical address ಇದ್ದರೆ ಮಾತ್ರ ಕಂಪ್ಯೂಟರ್ಗಳು ಬೇರೆ ಕಂಪ್ಯೂಟರ್ ಗಳನ್ನು ಗುರುತಿಸಿ, ಡೇಟಾ ಸೆಂಡ್ ಮಾಡುತ್ತದೆ.
IP Address ಇದ್ದರೆ ಮಾತ್ರ ನಿಮಗೆ Website ಓಪನ್ ಆಗುತ್ತದೆ ಇಲ್ಲವಾದರೆ ನಿಮಗೆ ಯಾವುದೇ ರೀತಿಯ Website ಓಪನ್ ಆಗುವುದಿಲ್ಲ.
ಯಾಕೆಂದರೆ ಕಂಪ್ಯೂಟರ್ಗಳಿಗೆ IP ಅಡ್ರೆಸ್ ಇದ್ದರೆ ಮಾತ್ರ ಆ ಕಂಪ್ಯೂಟರ್ ಸರ್ವರ್ ಗಳಿಗೆ
ಹೋಗಿ ನಿಮಗೆ Response ತೆಗೆದುಕೊಂಡು ಬರುತ್ತದೆ.
ಉದಾಹರಣೆಗೆ:
ನೀವು ನಿಮ್ಮ ಬ್ರೌಸರ್ ಬಳಸಿಕೊಂಡು google.com ವೆಬ್ಸೈಟ್ ಸರ್ಚ್ ಮಾಡಿದರೆ ಅದು google ಕಂಪ್ಯೂಟರ್ IP ಅಡ್ರೆಸ್ ಅನ್ನು DNS ಮೂಲಕ ಪತ್ತೆ ಮಾಡಿ ಆ ಲೊಕೇಶನ್ ಗೆ ರಿಕ್ವೆಸ್ಟ್ ಸೆಂಡ್ ಮಾಡುತ್ತದೆ. ನಂತರ google server (ಕಂಪ್ಯೂಟರ್) ನಿಮಗೆ response ಸೆಂಡ್ ಮಾಡುತ್ತದೆ.
ಈಗ ನೀವು ವೆಬ್ಸೈಟ್ ಲೋಡ್ ಆಗಿರುವುದನ್ನು ನಿಮ್ಮ ಬ್ರೌಸರ್ ಮೂಲಕ ನೋಡಬಹುದು.
ಈ ಚಿತ್ರವನ್ನು ನೀವು ಒಮ್ಮೆ ನೋಡಿ ಈ ರೀತಿ IP ಅಡ್ರೆಸ್ ಇರುತ್ತದೆ.
Network tab screen shot ಏನು ಇಲ್ಲಿ ಕಾಣುತ್ತಿದೆ. ಅದರಲ್ಲಿ ಗೂಗಲ್ ಕಂಪ್ಯೂಟರ್ IPV6 ಐಪಿ ಅಡ್ರೆಸ್ ನೋಡಬಹುದು.

ಕಂಪ್ಯೂಟರ್ಗಳಿಗೆ IP address ಐಡೆಂಟಿಟಿ, ಡೆಸ್ಟಿನೇಷನ್ ಹಾಗೂ ಲಾಜಿಕಲ್ ಲೊಕೇಶನ್ ನೀಡುತ್ತದೆ. ಇದರಿಂದ ಕಂಪ್ಯೂಟರ್ ಸುಲಭವಾಗಿ ಡೇಟಾ ಶೇರ್ ಮಾಡುತ್ತದೆ.
IP ಅಡ್ರೆಸ್ ಅಂದರೆ ಏನು?
IP ಅಡ್ರೆಸ್ ಎನ್ನುವುದು ಇಂಟರ್ನೆಟ್ Protocol ಅಂದರೆ ರೂಲ್ಸ್. ಈ ರೂಲ್ಸ್ ಗಳನ್ನು ಫಾಲೋ ಮಾಡಿದರೆ ಮಾತ್ರ ಕಂಪ್ಯೂಟರ್ ಮತ್ತೊಂದು ಕಂಪ್ಯೂಟರ್ಗಳಿಗೆ ಡೇಟಾ ಶೇರ್ ಮಾಡಲಾಗುತ್ತದೆ.
ಪ್ರತಿಯೊಂದು ಕಂಪ್ಯೂಟರ್ ಗಳಿಗೆ ಒಂದು ಯೂನಿಕ್ IP ಅಡ್ರೆಸ್ ಗಳನ್ನು ಅಸೈನ್ ಮಾಡಲಾಗಿರುತ್ತದೆ.
ಇದರಿಂದ ಯಾವುದೇ ರೀತಿಯ ಕಂಪ್ಯೂಟರ್ಗಳಿಗೆ ನಾವು ಡೇಟಾ ಶೇರ್ ಮಾಡಬಹುದು.
2 ರೀತಿಯ IP ಅಡ್ರೆಸ್ Version ಯಾವುದು
- IPV4
- IPV6
IPV4:
IPV4 ಇಂಟರ್ನೆಟ್ಟಿನಲ್ಲಿ ಇರುವ ಎಲ್ಲಾ ಕಂಪ್ಯೂಟರ್ಗಳಿಗೆ ಒಂದು ಯೂನಿಕ್ ಅಡ್ರೆಸ್ ನೀಡಲಾಗಿರುತ್ತದೆ. ಅದೇ IP ಅಡ್ರೆಸ್. IPV4 ಅಡ್ರಸ್ ಅಂದರೆ ಏನು?
192.168.1.1 – ಇದು 32 bit ಅಡ್ರೆಸ್ ಆಗಿರುತ್ತದೆ. ಅಂದರೆ ಇದರಲ್ಲಿ 32 binary digits (bits) ಇರುತ್ತದೆ.
IPV6:
IPV4 address ಇದ್ದರು IPV6 ಯಾಕೆ ಇಂಟರ್ನೆಟ್ ಇಂಜಿನಿಯರ್ಸ್ ಬಿಡುಗಡೆ ಮಾಡಿದ್ದರು? IPV4 ಬರೀ 4.2 ಬಿಲಿಯನ್ ಡಿವೈಸ್ ಗಳಿಗೆ ಮಾತ್ರ ಅಡ್ರೆಸ್ assign ಮಾಡಲು ಸಾಧ್ಯ.
ಆದರೆ ಈಗ ಪ್ರಪಂಚದಲ್ಲಿರುವ ಜನಸಂಖ್ಯೆ 8.2 billion ದಾಟಿದೆ. ಆದ್ದರಿಂದ IPV6 ಅಡ್ರೆಸ್ ತರಲಾಗಿದೆ.
IPV6 ಇದು 128 bit ಅಡ್ರೆಸ್ ಇದು ನೋಡುವುದಕ್ಕೆ ಈ ರೀತಿ ಇರುತ್ತದೆ:
2001:0d68:85a3:0000:0000:8a2e:0370:7334
ಇದನ್ನು Hexadecimal ಫಾರ್ಮ್ಯಾಟ್ ಅಲ್ಲಿ ಬರೆಯಲಾಗಿರುತ್ತದೆ.
ಸಾಮಾನ್ಯವಾಗಿ ಈ IPV6 ಅಡ್ರೆಸ್ ಕಾಲಿಯಾಗಲು ಸಾಧ್ಯವೇ ಇಲ್ಲ.
ಅಂದರೆ 340 Undecillion ಯುನಿಕ್ ಅಡ್ರೆಸ್ ಸಿಗುತ್ತದೆ. ಆದ್ದರಿಂದ ಈ ಅಡ್ರೆಸ್ ತರಲಾಗಿದೆ.
ವಿವಿಧ ರೀತಿಯ IP ಅಡ್ರೆಸ್ಗಳು ಯಾವುದು
- Public IP
- Private IP
- Static IP
- Dynamic IP
Public IP:
ಪಬ್ಲಿಕ್ IP ಅಡ್ರೆಸ್ ಅಂದರೆ ಈ ಅಡ್ರೆಸ್ಗಳು ಇಂಟರ್ನೆಟ್ಟಿನಲ್ಲಿ ವಿಸಿಬಲ್ ಆಗಿರುತ್ತದೆ ಅಂದರೆ ಯಾರು ಬೇಕಾದರೂ ನಿಮ್ಮ device IP ಅಡ್ರೆಸ್ಗಳನ್ನು ಚೆಕ್ ಮಾಡಬಹುದು. ಇದನ್ನು ಬಳಸಿಕೊಂಡೆ ಪೊಲೀಸ್ ಹಾಗು ಸೈಬರ್ ಡಿಪಾರ್ಟ್ಮೆಂಟ್ ಅಪರಾಧಿಗಳನ್ನು ಹಿಡಿಯುವುದು.
Private IP:
Private IP ಅಡ್ರೆಸ್ ಇದು ಬರಿ ನಿಮ್ಮ ಮನೆಯ ನೆಟ್ವರ್ಕ್ ಒಳಗೆ ಮಾತ್ರ ಕಾಣಬಹುದು.
ನಿಮ್ಮ ಮನೆಯಲ್ಲಿ ವೈಫೈ ರೂಟರ್ ಇದ್ದರೆ ಅದು ನಿಮಗೆ ಈ private IP ಅಡ್ರೆಸ್ ಕೊಡುತ್ತದೆ. ಈ ಅಡ್ರೆಸ್ಗಳು ಇಂಟರ್ನೆಟ್ ಗಳಲ್ಲಿ ಯಾರಿಗೂ ಸಿಗುವುದಿಲ್ಲ.
ನೀವು ನಿಮ್ಮ Private IP ಅಡ್ರೆಸ್ ಚೆಕ್ ಮಾಡಬೇಕು ಅಂದ್ರೆ ಈ ಕಮಾಂಡ್ ಹಾಕಿ ನಿಮ್ಮ ಕಂಪ್ಯೂಟರ್ command prompt ನಲ್ಲಿ ಹಾಕಿ:
Ipconfig – ಅಂತ ಟೈಪ್ ಮಾಡಿ ಈ ರೀತಿ ನಿಮ್ಮ ಪ್ರೈವೇಟ್ ಇಪ್ ಅಡ್ರೆಸ್ ಡಿಸ್ಪ್ಲೇ ಆಗುತ್ತದೆ
IPv4 Address. . . . . . . . . . . : 10.192.13.161
ಪ್ರೈವೇಟ್ IP ಅಡ್ರೆಸ್ ರೇಂಜ್ ಗಳು ಇದರ ಒಳಗೆ ಇರುತ್ತದೆ:
192.168.x.x – ಸಾಮಾನ್ಯವಾಗಿ ಮನೆಗಳಲ್ಲಿ ಬಳಸುವ ಡಿವೈಸ್ ಗಳಿಗೆ ಈ ಅಡ್ರೆಸ್ ನೀಡಲಾಗಿರುತ್ತದೆ.
10.x.x.x – ಈ ಅಡ್ರೆಸ್ಗಳನ್ನು ದೊಡ್ಡ ನೆಟ್ವರ್ಕ್ ಇರುವ ಸ್ಥಳಗಳಲ್ಲಿರುವ ಡಿವೈಸ್ ಗಳಿಗೆ ನೀಡಲಾಗುತ್ತದೆ.
172.16.x.x – 172.31.x.x – ಈ ಅಡ್ರೆಸ್ಗಳು ಬುಸಿನೆಸ್ ಕಂಪನಿಗಳಲ್ಲಿ ಉಪಯೋಗಿಸಲಾಗುತ್ತದೆ.
Static IP:
ಈ IP ಅಡ್ರೆಸ್ಗಳು ಸಾಮಾನ್ಯವಾಗಿ ಬದಲಾಗುವುದಿಲ್ಲ.
ಉದಾಹರಣೆಗೆ google server IP ಅಡ್ರೆಸ್.
Dynamic IP:
ಈ Dynamic IP ಅಡ್ರೆಸ್ ಗಳು ನಿಮಗೆ ನಿಮ್ಮ ISP (Internet Service Provider) ಮೂಲಕ ಸಿಗುತ್ತದೆ. ನೀವು ಯಾವ ಸಿಮ್ ಯೂಸ್ ಮಾಡುತ್ತಿರುತ್ತೀರಾ ಆ ಕಂಪನಿಗಳು ನಿಮಗೆ ಈ ಅಡ್ರೆಸ್ಗಳನ್ನು ನೀಡುತ್ತದೆ.
ಇದು ಸಾಮಾನ್ಯವಾಗಿ ಕೆಲ ಗಂಟೆ ಅಥವಾ ದಿನ ಕಳೆದಂತೆ ಬದಲಾಗುತ್ತದೆ.
ಯಾವ ರೀತಿ IP ಅಡ್ರೆಸ್ ಡಿವೈಸ್ಗಳಿಗೆ ನೀಡಲಾಗುತ್ತದೆ
ನಿಮ್ಮ ಮೊಬೈಲ್ ಇಂಟರ್ನೆಟ್ ಆನ್ ಮಾಡಿದರೆ ನಿಮ್ಮ ಫೋನ್ ಮೊದಲು ಹತ್ತಿರದ cell tower ಗೆ ಕನೆಕ್ಟ್ ಆಗುತ್ತದೆ.
ಈ ಟವರ್ ಗಳು ರೇಡಿಯೋ ಸಿಗ್ನಲ್ ಗಳನ್ನು ಹ್ಯಾಂಡಲ್ ಮಾಡುತ್ತದೆ.
ಈ ಟವರ್ ಗಳು ನಿಮ್ಮ ಸಿಮ್ ಡಿಟೈಲ್ಸ್ ಏನಿದೆ (IMSI Number) ಅದನ್ನು ಜಿಯೋ ನೆಟ್ವರ್ಕ್ ಗೆ ಸೆಂಡ್ ಮಾಡುತ್ತದೆ.
Jio ಆದರೆ Jio ನೆಟ್ವರ್ಕಿಗೆ, Airtel ಆದರೆ Airtel ನೆಟ್ವರ್ಕ್ ಗೆ,
ಈ ರೀತಿ ನಿಮ್ಮ ಸಿಮ್ ಡೀಟೇಲ್ಸ್ ಗಳನ್ನು ಸೆಂಡ್ ಮಾಡಲಾಗುತ್ತದೆ.
ಈಗ ಜಿಯೋ ನೆಟ್ವರ್ಕ್ ನಿಮ್ಮ SIM ಡೀಟೇಲ್ಸ್ ಏನಿದೆ ಅದನ್ನು ವೆರಿಫೈ ಮಾಡುತ್ತದೆ (PDN Gateway/User Plane Function) ವೆರಿಫೈ ಆದ ನಂತರ ಒಂದು Session ಕ್ರಿಯೇಟ್ ಆಗುತ್ತದೆ.
ಇದೆಲ್ಲಾ ಆದ ನಂತರ ನಿಮ್ಮ ಡಿವೈಸ್ ಗೆ IP ಅಡ್ರೆಸ್ allocate ಆಗುತ್ತದೆ.
ಒಂದು ವೇಳೆ ನೀವೇನಾದರೂ router ಮೂಲಕ ಡೇಟಾ ಪಡೆದುಕೊಳ್ಳುತ್ತಿದ್ದಾರೆ ಈ IP address allocation ಪ್ರೋಸೆಸ್ ಬೇರೆ ರೀತಿ ಇರುತ್ತದೆ. ಇದರಲ್ಲಿ DHCP (Dynamic Host Configuration Protocol) ಕೆಲಸ ಮಾಡುತ್ತದೆ.
ನಿಮಗೇನಾದರೂ ಕನ್ಫ್ಯೂಸ್ ಆದರೆ ಟೆನ್ಶನ್ ಆಗಬೇಡಿ ಯಾಕಂದರೆ ನೋಟ್ಸ್ ನೀಡಲಾಗಿರುತ್ತದೆ.
ನಿಮ್ಮ IP ಅಡ್ರೆಸ್ ಚೆಕ್ ಮಾಡುವುದು ಹೇಗೆ
- Mobile
- Windows
- LInux
Mobile:
ಮೊಬೈಲ್ ಬಳಸಿಕೊಂಡು ನಿಮ್ಮ IP ಅಡ್ರೆಸ್ ಚೆಕ್ ಮಾಡುವುದು ಹೇಗೆ ಅಂದರೆ ಮೊದಲಿಗೆ ನೀವು ನಿಮ್ಮ ಫೋನಿನ ಸೆಟ್ಟಿಂಗ್ಸ್ ಓಪನ್ ಮಾಡಿಕೊಳ್ಳಬೇಕು.
ನಂತರ ಅಲ್ಲಿ ನಿಮಗೆ About Device ಎಂದು ಆಪ್ಷನ್ ಇರುತ್ತದೆ ಅದನ್ನು ಕ್ಲಿಕ್ ಮಾಡಬೇಕು.
ಇದನ್ನು ಕ್ಲಿಕ್ ಮಾಡಿದ ನಂತರ ನಿಮಗೆ ಅಲ್ಲಿ Status ಎಂಬ ಒಂದು ಆಪ್ಷನ್ ಕಾಣುತ್ತದೆ ಅದನ್ನು ಕ್ಲಿಕ್ ಮಾಡಿ ಈಗ ಇಲ್ಲಿ ನಿಮಗೆ ಎಲ್ಲಾ ಡೀಟೇಲ್ಸ್ ಕಾಣುತ್ತದೆ.
- Battery status
- Battery level
- IMEI 1
- IMEI 2
- Serial number
- IMEI SV
- IP address
- Wi-fi MAC address
- Bluetooth address
- Up time
Windows:
Windows ಮೂಲಕ ನೀವು ನಿಮ್ಮ ಐಪಿ ಅಡ್ರೆಸ್ ಪರಿಶೀಲನೆ ಮಾಡಬೇಕಂತಿದ್ದರೆ ಈ ಸುಲಭವಾದ ಕಮಾಂಡ್ ಟೈಪ್ ಮಾಡಿದರೆ ಸಾಕು ನಿಮಗೆ ನಿಮ್ಮ ಐಪಿ ಅಡ್ರೆಸ್ ಸಿಗುತ್ತದೆ.
ipconfig
Linux:
ನೀವು ಸೈಬರ್ ಸೆಕ್ಯೂರಿಟಿ ಮಾಡುತ್ತಿದ್ದಾರೆ ನೀವು ಈ Linux OS ಬಳಸುತ್ತಿರುತ್ತೀರಾ, ಆದ್ದರಿಂದ ನಿಮ್ಮ IP ಅಡ್ರೆಸ್ ಪರಿಶೀಲನೆ ಮಾಡಬೇಕಂತಿದ್ದರೆ? ಈ ಕಮಾಂಡ್ ಟೈಪ್ ಮಾಡಿದರೆ ಸಾಕು IP ಅಡ್ರೆಸ್ ಸಿಗುತ್ತದೆ.
ifconfig
IP Address ಸೈಬರ್ ಸೆಕ್ಯೂರಿಟಿಗೆ ಹೇಗೆ ಸಂಬಂಧ
IP ಅಡ್ರೆಸ್ ಇದ್ದರೆ ಮಾತ್ರ ಇಂಟರ್ನೆಟ್ಟಿನಲ್ಲಿ ಡಿವೈಸ್ಗಳನ್ನು ಹುಡುಕಲು ಸಾಧ್ಯ.
ಆದರೆ ಸೈಬರ್ ಸೆಕ್ಯೂರಿಟಿ ಫೀಲ್ಡಿನಲ್ಲಿ IP ಅಡ್ರೆಸ್ ಬಹಳ ಮುಖ್ಯ ಯಾಕೆಂದರೆ cyber hackers ಈ ಅಡ್ರೆಸ್ ಗಳನ್ನು ಬದಲಾಯಿಸುತಲೇ ಇರುತ್ತಾರೆ.
ಇದನ್ನು ಬದಲಾಯಿಸುವುದರಿಂದ ನಿಮ್ಮ ಡಿವೈಸ್ ಐಡೆಂಟಿಟಿ ಏನಿದೆ ಅದು ಬದಲಾಗುತ್ತದೆ. ಇದರಿಂದ ಸೈಬರ್ ಸೆಕ್ಯೂರಿಟಿ ಇಂಜಿನಿಯರ್ಸ್ ಗಳಿಗೆ ನಿಮ್ಮ ಡಿವೈಸ್ ಹುಡುಕಲು ಕಷ್ಟವಾಗುತ್ತದೆ.
ಏನೇ ಕಂಪ್ಯೂಟರ್ ಫ್ರಾಡ್ ಗಳಾದರು ಮೊದಲು ಚೆಕ್ ಮಾಡುವುದು IP ಅಡ್ರೆಸ್.
ಯಾವ ಲೊಕೇಶನ್ ನಿಂದ ಫ್ರಾಡ್ ನಡೆದಿತ್ತು ಎಂದು ಚೆಕ್ ಮಾಡಲಾಗುತ್ತದೆ. ಆದರೆ ಅಂತಕರು ಇದನ್ನು ಚೇಂಜ್ ಮಾಡಿದರೆ ಯಾವ ದೇಶದಿಂದ attack ನಡೆದಿತ್ತು ಎಂದು ತಿಳಿಯುವುದು ಬಹಳ ಕಷ್ಟ.
ಇದೇ ಕಾರಣದಿಂದ IP ಅಡ್ರೆಸ್ ಬಹಳ ಮುಖ್ಯ.
IP Address ನೋಟ್ಸ್ for ಸ್ಟೂಡೆಂಟ್ಸ್
ಈ ಲೇಖನದಲ್ಲಿ ನಿಮಗೆ ಯಾವುದಾದರೂ ವಿಷಯಗಳ ಮೇಲೆ ಡೌಟ್ ಬಂದರೆ ನಮಗೆ ತಿಳಿಸುವುದನ್ನು ಮರೆಯಬೇಡಿ. ಅದೇ ರೀತಿ ನಿಮಗೆ ಇನ್ನಷ್ಟು ಹೆಚ್ಚು IP Address ವಿಷಗಳನ್ನು ತಿಳಿದುಕೊಳ್ಳಲು ಆಸಕ್ತಿ ಇದ್ದರೆ? ಈ IP Address ನೋಟ್ಸ್ ನಿಮಗಾಗಿ ತಯಾರು ಮಾಡಿದ್ದೇವೆ.